ಬಳ್ಳಾರಿ: ಸಾರ್ವಜನಿಕರ ಕುಂದುಕೊರತೆಗಳು ಆಲಿಸಿದ ಶಾಸಕ ಸೋಮಶೇಖರ್ ರೆಡ್ಡಿ

ಬಳ್ಳಾರಿ: ನಗರದ 18ನೇ ವಾರ್ಡ್ ನ ವಿವಿಧೆಡೆ ಬಳ್ಳಾರಿ ‌ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ‌ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ವಾರ್ಡ್ ನಲ್ಲಿರುವ ವಿವಿಧ ಮೂಲ ಸೌಕರ್ಯಗಳನ್ನು ಪರಿಶೀಲಿಸಿದರು ಹಾಗೂ ಸಾರ್ವಜನಿಕರ ಕುಂದುಕೊರತೆಗಳನ್ನು ಇದೇ ಸಂದರ್ಭದಲ್ಲಿ ಆಲಿಸಿದರು.
ಮೂಲಸೌಕರ್ಯಗಳಿಗೆ ಸಂಬಂಧಿಸಿದಂತೆ ಜನರ ಆಹವಾಲುಗಳಿಗೆ ಸ್ಪಂದಿಸಿದ ಶಾಸಕ ಸೋಮಶೇಖರ್ ರೆಡ್ಡಿ ಅವರು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತೆ ನಿರ್ದೇಶನ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಹಾಲು ಒಕ್ಕೂಟ ನಿರ್ದೇಶಕ ವೀರಶೇಖರ ರೆಡ್ಡಿ, ಮುಖಂಡರಾದ ಶ್ರೀನಿವಾಸ ಮೊತ್ಕಾರ್, ಕೃಷ್ಣ, ಎಪಿಎಂಸಿ ಸದಸ್ಯರಾದ ಕೃಷ್ಣ ರೆಡ್ಡಿ ಹಾಗೂ ಪಾಲಿಕೆಯ ಅಧಿಕಾರಿಗಳು ಹಾಜರಿದ್ದರು.