ಕುಟುಂಬದ ಜತೆ ಹಂಪಿ ವೀಕ್ಷಿಸಿದ ಡಿಜಿ ಪ್ರವೀಣ ಸೂದ್

ಹೊಸಪೇಟೆ: ರಾಜ್ಯ ಪೊಲೀಸ್
ಮಹಾನಿರ್ದೇಶಕ( ಡಿಜಿ&ಐಜಿ) ಪ್ರವೀಣ್ ಸೂದ್ ಅವರು ಕುಟುಂಬ ಸಮೇತ ಹಂಪಿಗೆ ಭೇಟಿ ನೀಡಿದರು.
ಹಂಪಿಗೆ ಭೇಟಿ ನೀಡಿದ ಡಿಜಿ&ಐಜಿ ಪ್ರವೀಣ ಸೂದ್ ಅವರು ವಿಜಯ ವಿಠ್ಠಲ ಮಂದಿರ, ಲೋಟಸ್ ಮಹಲ್, ಪುರಂದರದಾಸರ ಮಂಟಪ,ವಿರೂಪಾಕ್ಷೇಶ್ವರ ಮಂದಿರ ಸೇರಿದಂತ ವಿವಿಧ ಸ್ಥಳಗಳನ್ನು ಕುಟುಂಬ ಸಮೇತ ವೀಕ್ಷಿಸಿದರು.
ಪ್ರವೀಣ್ ಸೂದ್ ಅವರಿಗೆ ಹಂಪಿಯ ವಿವಿಧ ಪ್ರಮುಖ ಸ್ಥಳಗಳ ಮಹತ್ವವನ್ನು ಸ್ಥಳದಲ್ಲಿದ್ದ ಅಧಿಕಾರಿಗಳು ಮತ್ತು ಪ್ರವಾಸಿ ಮಾರ್ಗದರ್ಶಿ ಬಸಪ್ಪ ಅವರು ವಿವರಿಸಿದರು.
ಈ‌ ಸಂದರ್ಭದಲ್ಲಿ ಪೊಲೀಸ್,ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಇದ್ದರು.