ಹೊಸಪೇಟೆ: ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಅಂಗವಾಗಿ ಸ್ಥಳೀಯ ಡಾನ್ ಬೋಸ್ಕೊ ಸಂಸ್ಥೆ ಯಲ್ಲಿ ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ಜಾಗೃತಿ ಮೂಡಿಸಲಾಯಿತು.
ಮಕ್ಕಳೊಂದಿಗೆ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಮಕ್ಕಳಿಗಾಗಿ ಏರ್ಪಡಿಸಲಾಗಿದ್ದ ಡ್ಯಾನ್ಸ್ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
ಕಾರ್ಯಕ್ರಮದಲ್ಲಿ ಡಾನ್ ಬೋಸ್ಕೊ ಶಾಲೆಯ ಮುಖ್ಯಗುರು ಫಾದರ್ ಪ್ರವೀಣ್, ಗ್ರಾಮೀಣ ಬಾಲಕಿಯರ ವಸತಿನಿಲಯದ ಮೇಲ್ವಿಚಾರಕಿ ಸಿಸ್ಟರ್ ಸೆಲಿನಾರೋಸ್ ಹಾಗೂ ಸಿಸ್ಟರ್ ಮರ್ಲಿನ್, ಚೈಲ್ಡ್ ಲ್ಯೆನ್ ಸಂಯೋಜಕ ಚಿದಾನಂದ ಹಾಗೂ ಸಿಬ್ಬಂದಿಗಳಾದ ನೇತ್ರ, ಸ್ವಾಮಿ ಹಾಗೂ ಸಂತೋಷ ಇದ್ದರು.
ಕಾರ್ಯಕ್ರಮ ದಲ್ಲಿ 85ಮಕ್ಕಳು ಸೇರಿದಂತೆ ನೂರಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.