ಬಳ್ಳಾರಿ: ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೊಸಪೇಟೆ ನಗರದ ತಾಲೂಕು ಕ್ರೀಡಾಂಗಣದಲ್ಲಿ ಸೋಮವಾರ ‘ಮಹಿಳಾ ಸಂಸ್ಕೃತಿ ಉತ್ಸವ- 2021’ನ್ನು ಆಯೋಜಿಸಿತ್ತು.
ಈ ಕಾರ್ಯಕ್ರಮದಲ್ಲಿ ನಗರದ ಯುವ ಪ್ರತಿಭೆ ಕುಮಾರಿ ಸಾಯಿಶೃತಿ ಜಿ.ಪಿ. ಪ್ರಸ್ತುಪಡಿಸಿದ ಹಿಂದುಸ್ತಾನಿ ಗಾಯನ ನೆರೆದಿದ್ದ ಸಂಗೀತಪ್ರಿಯರ ತಲೆದೂಗುವಂತೆ ಮಾಡಿತು.
ದೊಡ್ಡಬಸಪ್ಪ ಗವಾಯಿ ಅವರು ಹಾರ್ಮೋನಿಯಂ ಸಾಥ್ ನೀಡಿದರು. ವಿಶೇಷ ವಿಕಲ ಚೇತನ ಉಮೇಶ ಸಂಡೂರು ತಬಲಾ ಸಾಥ್ ನೀಡಿದರು.
*****