ಅವಹೇಳನಕಾರಿ ಹೇಳಿಕೆ: ಕೃಷಿಸಚಿವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದ ರೈತರು

ಬಳ್ಳಾರಿ: ರೈತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದರೆನ್ನಲಾದ ಕೃಷಿ ಸಚಿವ ಬಿ.ಸಿ ಪಾಟೀಲ್ ಅವರ ಪ್ರತಿಕೃತಿಯನ್ನು ದಹಿಸಿ ರೈತರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ರೈತರನ್ನು ಭಯೋತ್ಪಾದಕರು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ನೀಡಿದರೆನ್ನಲಾದ ಹೇಳಿಕೆಯನ್ನು ರೈತ ಮುಖಂಡರು ಬಲವಾಗಿ ವಿರೋಧಿಸಿದರು. ಮಾತ್ರವಲ್ಲ ಬುಧವಾರ ಅಖಿಲಭಾರತ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಪದಾಧಿಕಾರಿಗಳು, ಸದಸ್ಯರು,
ರೈತರು ನಗರದ ರಾಯಲ್ ವೃತ್ತದಲ್ಲಿ ಸಚಿವರ ಪ್ರತಿ ಕೃತಿ ದಹಿಸಿ ವಿರೋಧ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮುಖಂಡರಾದ ಶಿವಶಂಕರ್, ಮಾಧವರೆಡ್ಡಿ, ಸತ್ಯಬಾಬು,ಸೋಮಣ್ಣ ಮುಂತಾದವರು ಬಾಗವಹಿಸಿದ್ದರು.