ಕವಯತ್ರಿ ಶ್ರೀಮತಿ, ರತ್ನಾ .ಎಂ . ಅಂಗಡಿ ಅವರ ಕಿರು ಪರಿಚಯ
lಹೆಸರು : ಶ್ರೀಮತಿ, ರತ್ನಾ .ಎಂ . ಅಂಗಡಿ
ತಂದೆ : ಶ್ರೀ ನಿಜಲಿಂಗಪ್ಪ. ವೀ. ಸಜ್ಜನರ
ತಾಯಿ : ಶ್ರೀಮತಿ, ಸಾವಿತ್ರಮ್ಮ. ನಿ. ಸಜ್ಜನರ
ಪತಿ : ಎ . ಮಂಜುನಾಥ್, ಉಪನ್ಯಾಸಕರು
ಜನ್ಮಸ್ಥಳ : ನರೇಗಲ್ ತಾ; ರೋಣ ಜಿಲ್ಲಾ : ಗದಗ
ವಿದ್ಯಾಭ್ಯಾಸ : ಬಿಎ, ಬಿಇಡಿ
ಪ್ರಕಟಿತ ಕೃತಿಗಳು :
೧ ) ನನ್ನ ತಂಗಿ ರಾಣಿ
ಮಕ್ಕಳ ಸಚಿತ್ರ ಕವನ ಸಂಕಲನ
೨ ) ಸ್ವಾತಿ ಹನಿಗಳು
ಹನಿಗವನ ಸಂಕಲನ
೩ ) ಸತ್ಯದ ಬೆಳಕಿಗಾಗಿ….
ಕವನ ಸಂಕಲನ
ಸಾಹಿತ್ಯ ಸಂಘಟನೆ:
೧ ) ಅಧ್ಯಕ್ಷರು: ಮುಂಡರಗಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ &
೨ ) ಮುಂಡರಗಿ ತಾಲೂಕು ಮಕ್ಕಳ ಸಾಹಿತ್ಯ ವೇದಿಕೆ ( ಎರಡು ಅವಧಿಯ ಸೇವೆ )
೩ ) ಪ್ರಧಾನ ಕಾಯ೯ದಶಿ೯: ಮುಂಡರಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್.
೪ ) ಶ್ರೀ ವಿಶ್ವನಾಥ್. ಶಿ . ಸಜ್ಜನರ ಹೈಸ್ಕೂಲ್ ಸಲಹಾ ಸಮಿತಿ ನಿದೇ೯ಕಳಾಗಿ ಸೇವೆ, ಮುಂಡರಗಿ .
೫ ) ಪ್ರಧಾನ ಕಾಯ೯ದಶಿ೯: ಶ್ರೀ ಜಗದ್ಗುರು ಅನ್ನದಾನೇಶ್ವರ ” ಅಕ್ಕನ ಬಳಗ ” ಮುಂಡರಗಿ
ಸನ್ಮಾನ-ಪ್ರಶಸ್ತಿಗಳು:
ಸಿರಿಗನ್ನಡ ಸಾಹಿತ್ಯ ವೇದಿಕೆ, ರಾಜ್ಯಮಟ್ಟದ ಮಹಿಳಾ ಸಮ್ಮೇಳನ, ಬೆಳಗಾವಿ.
ರಾಜ್ಯಮಟ್ಟದ ” ಕಾವ್ಯಸಿರಿ ” ಪ್ರಶಸ್ತಿ.
ಮುಂಡರಗಿಯ ಪ್ರಿಯದಶಿ೯ನಿ ಬಿ.ಇಡಿ ಕಾಲೇಜು ವತಿಯಿಂದ ಸನ್ಮಾನ.
” ಗುರುರಾಜ ಪ್ರಕಾಶನ ” ಬೆಂಗಳೂರು ಇವರಿಂದ ಸಾಹಿತ್ಯ ಸೇವೆಗಾಗಿ ಸನ್ಮಾನ.
ಇಂದಿನ “ಅನುದಿನ ಕವನ”ದ ಗೌರವಕ್ಕೆ ಶ್ರೀಮತಿ ರತ್ನಾ ಅಂಗಡಿ ಅವರ ‘ಜೀವ ದೀಪ’ ಕವಿತೆ ಪಾತ್ರವಾಗಿದೆ.👇
ಜೀವದೀಪ
🌷🌷🌷🌷🌷
ಗಭ೯ದೊಳಗೆ ಬೀಜಾಂಕುರಿಸಿ
ಬೇಸೆಯುತ್ತಿದೆ ಜೀವ ಭಾವವ
ಹೊಸೆಯುತ್ತಿದೆ ಕರುಳಬಳ್ಳಿಯ
ಜೀವ ಜೀವಿಗಳ ಬಂಧನವ
ಜಗದ ಮಿಣುಕು ಜೀವವು
ಗಭ೯ ಕವಚದಿ ಬಂಧನವು
ಪಲ್ಲವಿಸಿ ಪ್ರೀತಿ ಸವಿದು
ತಾನು ಸವಿ ಹಂಚುತಾ
ಮಾಂಸಮುದ್ದೆ ಅಂಗಾಂಗ
ಚಿಗೆರೆಡೆದು ಚೀಗಿಯುತಾ
ಅನನ್ಯ ವಾತ್ಸಲ್ಯ ರಕ್ಷಣೆ
ತಾಣದಿ ಜೀವ ಮಿಡಿಯುತಾ
ಕಾಯ ಕವಚದಿ ಜೀವದ ಅಣು
ಸೃಷ್ಟಿಯ ವಿಸ್ಮಯ ಕಾಯವು
ಮಾತೆ ತುತ್ತು ಸೆಳೆದು ತಾ
ಅನುಕ್ಷಣವು ಬೆಳೆಯುತಾ
ಸ್ಪಶ೯ ಸಂತಸಕ್ಕೆ ಉಲಿದು
ಕ್ಷಣಕ್ಷಣ ಕೊನುರುತಾ
ಅನಂತ ದ್ಯಾನದಿ ಮೌನದಿ
ಜೀವ ಮುಳುಗೆಳುತಾ
ಕಸಿಕಟ್ಟಿ ಕೂಸಾಗಿ ಒಡಲಲಿ
ರೂಪ ರೂಪಗಳ ಬೆಸೆಯುತಾ
ಮಾತೆ ಪುಟ್ಟ ಜೀವಕೆ ದಟ್ಟ
ಜೀವದೀಪ ಬೆಳುಗುತಾ
ಅಕ್ಕರೆಯ ಅಮ್ಮನ ಮಡಿಲ
ಮಗುವಾಗಿ ಹಾಯಾಗಿರಲು
ಕೂಸು ಪ್ರೀತಿ ಬಲೆಯಲಿ ಕಾದಿದೆ
ಭೂಸ್ಪಶ೯ಕೆ ತವಕಿಸುತಾ……..
#ರತ್ನಾ ಎಂ ಅಂಗಡಿ ✍️
ಹುಬ್ಬಳ್ಳಿ