💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’ -ದೊಡ್ಡಬಸಪ್ಪ ಕರಿಗಾರ, (ಬಿಗ್’ಬಿ) ಹಿರೇಹೆಗ್ಡಾಳ್

ಇಂದು ಪ್ರೇಮಿಗಳ ದಿನಾಚರಣೆ…ವಿಶ್ವದಾದ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಯುವ ಲೇಖಕ ದೊಡ್ಡಬಸಪ್ಪ ಕರಿಗಾರ ಅವರು ಪ್ರೇಮಿಗಳ ದಿನಾಚರಣೆಗಾಗಿಯೇ ಬರೆದಿರುವ ಈ ಪುಟ್ಟಬರಹವನ್ನು ಓದಿ…ಖುಷಿಪಡಿ👇
*****
‘💞ಪ್ರೀತಿ ಹೃನ್ಮನಗಳೊಂದಿಗಿನ ನಿತ್ಯದ ಹಾಜರಾತಿ’
ಸ್ನೇಹಿತರೆ, ಪ್ರೀತಿ ಅನ್ನೋದು ಪಕ್ಷಿ ಸಂತತಿಯ ಹಾಗೆ. ಒಂದಲ್ಲಾ ಒಂದು ದಿನ ರೆಕ್ಕೆ ಬಡಿದು ಬಾನಂಗಳದಿ ಹಾರಲೇ ಬೇಕು!
ಬಾಹ್ಯ ಒತ್ತಡಗಳಿಗೆ ಮಣಿಯದೆ, ಹರಸಿ ಬಂದ ಒಲವನ್ನ ಉಯ್ಯಾಲೆಯಾಗಿಸಬೇಕು. ನಮ್ಮ ಹಿತ ಬಯಸುವ ಮನಗಳಲ್ಲಿ ಕೂಲಂಕುಷವಾಗಿ ಅನುಬಂಧದ ಅನುರಾಗವನ್ನ ಪ್ರಸ್ತಾಪಿಸುವ ಕೆಚ್ಚೆದೆ ಉಭಯ ಪ್ರೇಮಿಗಳ ಗುರುತರ ಜವಾಬ್ದಾರಿಯಾಗಬೇಕು.
ಅಂತೆಯೇ ಪ್ರೀತಿ ಕೇವಲ ತೋರಿಕೆಯ ವಿಷಯವಲ್ಲ ಅದೊಂದು ಅಂತರಾತ್ಮಗಳ ಭಾವನಾತ್ಮಕ ಬೆಸುಗೆಯ ಪವಿತ್ರ ಸಂಗಮ.
ಪ್ರೀತಿ ಪದಗಳಿಲ್ಲದೆ ಸೂಸುವ ಪರಿಮಳ!
ನಾ ಹ್ಯಾಂಗ ವರ್ಣಿಸಲಿ ಅಂತರಂಗದಲ್ಲಿ ನೆಲೆಸಿದವಳ!
ಅವಳೊಂದು ಎನ್ನ ಹೃದಯವೆಂಬ ಚಿಪ್ಪಿನೊಳಿರುವ ಹವಳ!
ಒಟ್ಟಾರೆಯಾಗಿ ಪ್ರೀತಿಯೊಂದು ಹೃದಯವೆಂಬ ಹಣತೆಯಲ್ಲಿ ಉರಿಯುವ ಪರಂಜ್ಯೋತಿ.
*****
ಪ್ರೀತಿ ಎರಡು ಮನಸುಗಳ ಸುಂದರವಾದ ಬೆಸುಗೆ.
ಜೀವನದ ಕೊನೆಯವರೆಗೂ ಸದಾ ಒಡನಿರುವ ಅಪ್ಪುಗೆ.
ಉಸಿರು ಉಸಿರಿರುವ ತನಕ ಸುಖದುಃಖಗಳನ್ನ ಸಮಾನವಾಗಿ ಹಂಚಿಕೊಳ್ಳುವ ಪವಿತ್ರವಾದ ಸಂಕೋಲೆ!

– ದೊಡ್ಡಬಸಪ್ಪ ಕರಿಗಾರ, (ಬಿಗ್’ಬಿ) ಹಿರೇಹೆಗ್ಡಾಳ್, ಕೂಡ್ಲಿಗಿ ತಾಲೂಕು, ವಿಜಯನಗರ ಜಿಲ್ಲೆ