ರಾಜ್ಯೋತ್ಸವ-ನಿತ್ಯೋತ್ಸವ
ಕರ್ನಾಟಕದ ಘನ ರಾಜ್ಯೋತ್ಸವ
ಕನ್ನಡ ತಾಯಿಯ ಶುಭ ನಿತ್ಯೊತ್ಸವ
ಗತವೈಭವದ ಇತಿಹಾಸೋತ್ಸವ
ಗಜ ಹುಲಿ ಕೇಸರಿ ಕಲಿ ಸಮರೋತ್ಸವ
ನದಿ ಗಿರಿ ಬನ ಖನಿ ಸಿರಿಸ್ವರ್ಗೋತ್ಸವ
ನಾಟಕ ನರ್ತನ ಸಾಂಸ್ಕೃತಿಕೋತ್ಸವ
ಕವಿ ಕೋಗಿಲೆಗಳ ಸವಿ ಕಾವ್ಯೋತ್ಸವ
ಚಿಂತನ ಮಂಥನ ಸಾಹಿತ್ಯೋತ್ಸವ
ಮೌಢ್ಯತೆ ತೊಡೆಯುವ ಸುವಿಚಾರೋತ್ಸವ
ಶಿಲ್ಪ ಲಲಿತ ಕಲೆ ಸಂಗೀತೋತ್ಸವ
ಕುವೆಂಪು ಬೇಂದ್ರೆ ಕಾರಂತೋತ್ಸವ
ಮಾಸ್ತಿ ವಿನಾಯಕ ಗೋಕಾಕೋತ್ಸವ
ಅನಂತಮೂರ್ತಿ ಕಾರ್ನಾಡ ಕಂಬಾರೋತ್ಸವ
ಜ್ಞಾನಪೀಠದಲಿ ದಿಗ್ವಿಜಯೋತ್ಸವ
ವಿಶ್ವ ಪಥದಲಿ ಮನುಜ ಮತೋತ್ಸವ
ವಿಶ್ವ ಮಾನವತೆಯ ನಿಜ ಧರ್ಮೋತ್ಸವ
ಅರಿವಿನ ಕಾರ್ತಿಕ ಶುಭ ದೀಪೋತ್ಸವ
ಕನ್ನಡ ಗಡಿ ಗುಡಿ ನುಡಿ ದಿವ್ಯೋತ್ಸವ
~~~~~~~
– ಟಿ.ಕೆ.ಗಂಗಾಧರ ಪತ್ತಾರ ಬಳ್ಳಾರಿ
~~~~~~~