ದಂಡಿನಶಿವರದಲ್ಲಿ ಹವ್ಯಾಸಿ ಪತ್ರಕರ್ತ ಡಾ.ಅಮ್ಮಸಂದ್ರ ಸುರೇಶ್ ಅವರಿಗೆ ಗೌರವ ಸನ್ಮಾನ

ಮೈಸೂರು: ಯಾರಿಗೇ ಆದರೂ ತಮ್ಮ ಹುಟ್ಟೂರಿನಲ್ಲಿ ಮಾಡುವ ಸನ್ಮಾನ ಮತ್ತು ಗೌರವಗಳಿಗೆ ಸರಿಸಾಟಿ ಬೇರಾವುದೂ ಇಲ್ಲ.
ನನ್ನ ಹುಟ್ಟೂರು ಅಮ್ಮಸಂದ್ರ ಆದರೂ ನನಗೆ ಹೆಚ್ಚು ಗೌರವಾಧಾರಗಳು ದೊರೆತದ್ದು ದಂಡಿನಶಿವರದಲ್ಲಿ. ದಂಡಿನಶಿವರದ ಗ್ರಾಮಸ್ಥರು, ಬುದ್ಧಿಜೀವಿಗಳು, ಹಿರಿಯರು ನನ್ನನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಆರಂಭದಿಂದಲೂ ಮಾಡುತ್ತಾ ಬಂದಿದ್ದಾರೆ. ಭಾನುವಾರ ನಡೆದ ದಂಡಿನಶಿವರದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿಗಳ ಸಂಘದ “ಸ್ನೇಹ ಸಮ್ಮಿಲನ ಮತ್ತು ಗುರುವಂದನಾ” ಕಾರ್ಯಕ್ರಮಕ್ಕೆ ನನ್ನನ್ನು ಮುಖ್ಯ ಅತಿಥಿಯನ್ನಾಗಿ ಆಮಂತ್ರಿಸಿದ ಜತೆಗೆ ಗೌರವಿಸಿ ಸನ್ಮಾನಿಸಿದರು. ಕಾಲೇಜಿನ ಎಲ್ಲಾ ಹಳೆ ವಿದ್ಯಾರ್ಥಿಗಳ ಪ್ರೀತಿಗೆ ನಾನು ಆಭಾರಿಯಾಗಿದ್ದೇನೆ.
ಈ ಸಂದರ್ಭದಲ್ಲಿ ಕವಿ ಲಕ್ಷ್ಮೀಶನ ಕುರಿತು “ಇವ ನಮ್ಮವ ,ಇವ ನಮ್ಮವ”ಎಂದು ಸುರಪುರದ ದೇವಪುರದವರು ಮತ್ತು ಚಿಕ್ಕಮಗಳೂರು ಜಿಲ್ಲೆಯ ದೇವನೂರಿನವರು ಲಕ್ಷ್ಮೀಶ ನಮ್ಮ ಊರಿನವನು ಎಂದು ಎರಡೂ ಊರಿನವರು ಪರಸ್ಪರ ನಡೆಸುತ್ತಿದ್ದ ವಾದ-ವಿವಾದಗಳು ನೆನಪಿಗೆ ಬಂದವು.
ಹುಟ್ಟೂರು ಅಮ್ಮಸಂದ್ರ ಮತ್ತು ಬೆಳೆದ ಊರು ದಂಡಿನಶಿವರದ ಎಲ್ಲಾ ಗ್ರಾಮಸ್ಥರ ಪ್ರೀತಿ ಅಭಿಮಾನಗಳಿಗೆ ನಾನು ಆಭಾರಿ.
#ಡಾ.ಅಮ್ಮಸಂದ್ರ ಸುರೇಶ್, ಮೈಸೂರು
*****