ಕವಿ ಕೆ.ಪರಮೇಶ (ಗಾನಾಸುಮಾ)
ಪಟ್ಟಸೋಮನಹಳ್ಳಿ ಅವರ ಕಿರುಪರಿಚಯ:
ಮಂಡ್ಯ ಜಿಲ್ಲೆಯ ಪಾಂಡವಪುರ ತಾ ನ ಪಟ್ಟಸೋಮನಹಳ್ಳಿ ಗ್ರಾಮದ ನಿವಾಸಿ.ಕೆ.ಪರಮೇಶ ಅವರ ಕಾವ್ಯನಾಮ “ಗಾನಾಸುಮಾ”.
ಈ ಕಾವ್ಯನಾಮದಲ್ಲೇ ಜನಪ್ರಿಯವಾಗಿರುವ ಇವರು
ಮೈಸೂರು ಆಕಾಶವಾಣಿಯ ನಿತ್ಯ ನಿರಂತರ ಕೇಳುಗರಾಗಿ ನಿಲಯದ ಒಡನಾಟದಲ್ಲಿ ಇವರ ಹೆಸರು ಚಿರಪರಿಚಿತ. ಇಂದಿಗೂ ಆಕಾಶವಾಣಿಯ ನಂಟು ಬಿಟ್ಟಿರುವುದಿಲ್ಲ.
ಬಿ.ಎ ಪದವೀಧರ ರಾಗಿರುವ ಗಾನಸುಮಾ ಅವರಿಗೆ .ಗಾಯನ,ಕವಿತೆ ರಚನೆ ಜತೆ ಪತ್ರಿಕೆಗಳಿಗೆ ಲೇಖನ ಮತ್ತು ಅಂಕಣಗಳನ್ನ ಬರೆಯುವ ಹವ್ಯಾಸವಿದೆ.
ಇವರ ಮೊದಲ ಕವಿತಾ ಸಂಕಲನ “ಮಹಿಷಮಂಡಲ ಮದ್ಯದೊಳಗೆ” ಪ್ರಕಟವಾಗಿದೆ.
.ಈ ಕೃತಿಗೆ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ರವರು ಮುನ್ನುಡಿ ಬರೆದು ಉತ್ತೇಜಿಸಿದ್ದು ಮಾತ್ರವಲ್ಲ ಕೃತಿ ಬಿಡುಗಡೆ ಮಾಡಿ ಹಾರೈಸಿದ್ದಾರೆ.
ತಾಲ್ಲೂಕು,ಜಿಲ್ಲಾ,ರಾಜ್ಯಮಟ್ಟದ ಕವಿಗೋಷ್ಠಿಗಳಲ್ಲಿ ಕವಿತೆಗಳನ್ನು ವಾಚಿಸಿದ್ದಾರೆ.
*****
ಇಂದಿನ “ಅನುದಿನ ಕವನ”ದ ಗೌರವಕ್ಕೆ ಗಾನಸುಮಾ ಅವರ ಮೂರು ಕವಿತೆಗಳು ಪಾತ್ರವಾಗಿವೆ.👇
🌹 ಪ್ರೇಮಾಕಾಂಕ್ಷಿ 🌷
~~~~~~~~~~~~~~
ನಲ್ಲಾ…
ಸಿದ್ದವಾಗಿದೆ
ಶುದ್ದ
ಮನಸಿನ
ನನ್ನೊಳಗಿನ
ಪ್ರೇಮಖಾದ್ಯ
ಸದ್ದಿಲ್ಲದೇ
ಬಂದು ಬಿಡು
ಇಂದು
ನಮ್ಮದೇ ದಿನದ
ಪ್ರೇಮಕಾವ್ಯ..!
*****
ಮದ್ದಾನೆ ಮನಸು
————-
ಮನದಾಳದ
ನೋವಿಗೆ
ಮನೆಯ ಮದ್ದು
ಮುದ್ದಾಗಲಿಲ್ಲ..
ಮುದ್ದಿಸಿ ತಂದ
ಮದ್ದಾನೆ
ಕದ್ದು
ಗುದ್ದಾಡಿ ಹೋಯ್ತೇ
ಹೊರತೂ
ಮುದ್ದಾಗಲೇ ಇಲ್ಲ..!
*****
ನಿರೀಕ್ಷೆಯ ನೆಚ್ಚಿಗ
————–
ನೀ
ನಡೆದ
ಹಾದಿಯ
ಬದುಕಿನ
ಹೆಜ್ಜೆಗಳಲೇ
ಸಾಗುತಿರುವೆ
ಅಲೆಗೆ ಸಿಕ್ಕಿ
ಹೆಜ್ಜೆ ಗುರುತು
ಅಳಿಸುವ
ಮುನ್ನ
ಈ ಶಬರಿ
ಜೀವಕ್ಕೊಂದು
ಮುಕ್ತಿ ನೀಡಿಬಿಡು..!!!
-ಗಾನಾಸುಮಾ ಪಟ್ಟಸೋಮನಹಳ್ಳಿ
ಪಾಂಡವಪುರ ತಾ
ಮಂಡ್ಯ ಜಿಲ್ಲೆ.571434