ಚಿತ್ರಕಲಾ ಸ್ಪರ್ಧೆ: ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ರಾಣೇಬೆನ್ನೂರಿನ ಬಾಲ ಪ್ರತಿಭೆಗಳು

ರಾಣೇಬೆನ್ನೂರು: ನಗರದ ಟ್ಯಾಗೋರ್ ಏಜ್ಯುಕೇಶನ್ ಸೊಸೈಟಿಯ, ರೋಟರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 6 ನೇ ತರಗತಿ ವಿದ್ಯಾರ್ಥಿ ಪಂಕಜ್ ಕಾಗದಗಾರ ಹಾಗೂ 2 ನೇ ತರಗತಿ ವಿದ್ಯಾರ್ಥಿ ಪ್ರಣವ್ ಕಾಗದಗಾರ ಇವರು ಅತ್ಯುನ್ನತ ” ಎ” ಶ್ರೇಣಿ ಪಡೆದು ರಾಷ್ಟ್ರ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಸೆಂಟರ್ ಫಾರ್ ಏಜ್ಯುಕೇಶನ್ ಡೆವೆಲಪ್ಮೆಂಟ್ ಮತ್ತು ರಿಸರ್ಚ್, ಪುಣೆ( ಮಹಾರಾಷ್ಟ್ರ) ಇವರು ಆಯೋಜಿಸಿದ್ದ ಮಕ್ಕಳ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ರಾಜ್ಯಮಟ್ಟದ ವಿಭಾಗದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಖ್ಯಾತ ಚಿತ್ರಕಾರ, ಲೇಖಕ ನಾಮದೇವ ಕಾಗದಗಾರ ಅವರ ಪುತ್ರರಾದ ಈ ಬಾಲ ಪ್ರತಿಭೆಗಳು ತಂದೆಯ ಮಾರ್ಗದರ್ಶನದಲ್ಲಿ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.
ಪಂಕಜ್ ಕಾಗದಗಾರ. ” ನೀರನ್ನು ಉಳಿಸಿ ಎಂಬ ಜಾಗೃತಿ ವಿಷಯದ ಕುರಿತು ಚಿತ್ರಿಸಿದರೆ, ಪ್ರಣವ್ ಕಾಗದಗಾರ ಪಕ್ಷಿ ಸಂಕುಲದ ಬಗ್ಗೆ ಚಿತ್ರಿಸಿ ಗಮನಸೆಳೆದಿದ್ದರು.