ಬಳ್ಳಾರಿ: ರಂಗ ಕಲಾನಿಧಿ ಸಿಡಿಗಿನಮೊಳೆ ವೈ.ಎಂ.ಚಂದ್ರಯ್ಯ ಅವರ ಜನ್ಮ ಶತಮಾನೋತ್ಸವದ ನಿಮಿತ್ತ ನಡೆಯುತ್ತಿರುವ ಬಳ್ಳಾರಿ ರಂಗ ರಥೋತ್ಸವದ ನಾಲ್ಕನೇ ದಿನವಾದ ಶನಿವಾರ ಸಂಜೆ ಶಿವಮೊಗ್ಗ ರಂಗಾಯಣದ ಕಲಾವಿದರು ಹಕ್ಕಿ ಕಥೆ ಅಭಿನಯಿಸುವರು.
ಶನಿವಾರ ಬೆಳಿಗ್ಗೆ ರಂಗಮಂದಿರಕ್ಕೆ ಕರ್ನಾಟಕ ಕಹಳೆ ಡಾಟ್ ಕಾಮ್ ಭೇಟಿಕೊಟ್ಟ ಸಂದರ್ಭದಲ್ಲಿ ಕಲಾವಿದರು, ಕೆಲಸಗಾರರು ರಂಗ ಸಜ್ಜಿಕೆಯನ್ನು ಅಣಿಗೊಳಿಸುತ್ತಿದ್ದರು.
ಖ್ಯಾತ ಸಾಹಿತಿ ನಾ.ಡಿಸೋಜರವರ ಕಾದಂಬರಿ ‘ಹಕ್ಕಿಗೊಂದು ಗೂಡು ಕೊಡಿ’ ಆಧಾರಿತ ರಂಗರೂಪಾಂತರ ಹಕ್ಕಿ ಕಥೆ. ಇದನ್ನು ಎಸ್.ಮಾಲತಿ ಅವರು ರಂಗ ರೂಪಾಂತರಗೊಳಿಸಿದ್ದಾರೆ.ಗಣೇಶ್ ಮಂದಾರ್ತಿ ಮತ್ತು ಶ್ರವಣ್ ಹೆಗ್ಗೋಡು ಈ ನಾಟಕವನ್ನು ನಿರ್ದೇಶಿಸಿದ್ದಾರೆ.
ಜಪಾನಿನ ಬುನ್ರಾಖು ಶೈಲಿಯ ಗೊಂಬೆಗಳನ್ನು ಬಳಸಿರುವುದು ಈ ನಾಟಕದ ವೈಶಿಷ್ಟ.
ಪರಿಸರ ನಾಶದಿಂದ ಪಕ್ಷಿ ಸಂಕುಲಗಳ ಅಳಿವಿನ ಕಥೆಯನ್ನು ಈ ನಾಟಕದಲ್ಲಿ ಹಿಡಿದಿಡಲಾಗಿದೆ.
*****