ಬಳ್ಳಾರಿ: ಸರ್ಕಾರದ ಜತೆ ಸಾರ್ವಜನಿಕರು, ಸಂಘ ಸಂಸ್ಥೆಗಳು ಕೈಜೋಡಿಸಿದಾಗ ಮಾತ್ರ ಗ್ರಾಮೀಣ ಕಲೆಗಳನ್ನು ಉಳಿಸಲು ಸಾಧ್ಯ ಎಂದು ಹಿರಿಯ ರಂಗಭೂಮಿ ಕಲಾವಿದ ಪುರುಷೋತ್ತಮ ಹಂದ್ಯಾಳ ಅಭಿಪ್ರಾಯಪಟ್ಟರು.
ಸಂಡೂರು ತಾಲೂಕಿನ ಯರದಮ್ಮನಹಳ್ಳಿ ಗ್ರಾಮದಲ್ಲಿ ಭಾರತ ಹುಣ್ಣಿಮೆ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಅದ್ಬುತ ಪ್ರತಿಭೆಗಳು ಉದಯವಾಗುತ್ತವೆ.ಪ್ರತಿಭೆ ಗುರುತಿಸುವ ಕೆಲಸ ಶಿಕ್ಷಕರಿಂದಾಗಬೇಕು.ಆ ಉತ್ತಮ ಪ್ರತಿಭೆಗಳಿಗೆ ವೇದಿಕೆ ಒದಗಿಸುವ ಕೆಲಸವನ್ನು
ಸಂಘ-ಸಂಸ್ಥೆಗಳು ಮಾಡಬೇಕು.ಹಾಗಾದಲ್ಲಿ ಮಾತ್ರ ಗ್ರಾಮೀಣ ಪ್ರತಿಭೆಗಳು ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶ ದೊರೆಯುತ್ತದೆ ಎಂದರು.
ದೊಡ್ಡಾಟ: ಸನ್ಮಾರ್ಗ ಗೆಳೆಯ ಬಳಗ ಮತ್ತು ಶ್ರೀ ಮಹಾದೇವ ತಾತ ಕಲಾ ಸಂಘ ಹಂದ್ಯಾಳ್ ಸಹಯೋಗದಲ್ಲಿ ರಂಗಕರ್ಮಿ ದಿ.ಶಿವಶಂಕರ ನಾಯ್ದು ರಚಿಸಿದ ಪುರುಷೋತ್ತಮ ಹಂದ್ಯಾಳ ನಿರ್ದೇಶನದಲ್ಲಿ ಮೂಡಿಬಂದ ದನಕಾಯುವವರ ದೊಡ್ಡಾಟ ಎಂಬ ಹ್ಯಾಸ ನಾಟಕವು ಪ್ರದರ್ಶನಗೊಂಡು ಜನಮನ ಸೂರೆಗೊಂಡಿತು.
ನಾಟಕದಲ್ಲಿ ಸಾರಥಿ ಪಾತ್ರದಾರಿಯಾಗಿ ಪುರುಷೋತ್ತಮ ಹಂದ್ಯಾಳ್, ಗಣಪತಿ-ಚಂದ್ರಶೇಖರ್ ಆಚಾರ, ಶ್ರೀಕೃಷ್ಣ-ಶಿಕ್ಷಕ ಯರಿಸ್ವಾಮಿ, ಧುರ್ಯೋಧನ-ಅಂಬರೀಶ ಹಚ್ಚೊಳ್ಳಿ, ದುಶ್ಯಾಸನ-ಪಾರ್ವತೀಶ ಗೆಣಕಿಹಾಳ್, ಗೌಡನ ಪಾತ್ರದಲ್ಲಿ ಹೊನ್ನುರಸ್ವಾಮಿ, ದ್ರೌಪದಿ-ಜಡೇಶ ಎಮ್ಮಿಗನೂರು, ಭೀಮ-ಸುಂಕಪ್ಪ, ನಕುಲ್-ಸುರಜ್, ಸಹದೇವ-ಹನುಮಂತಪ್ಪ ಪಾತ್ರಕ್ಕೆ ಜೀವ ತುಂಬಿ ಮೆರಗು ತಂದರು.
ಸಂಗೀತದಲ್ಲಿ ತಬಲ-ವೀರೇಶ ಸಿಡಗಿನಮೊಳ, ಹಾರ್ಮೋನಿಯಂ-ವಿ.ಚಂದ್ರಪ್ಪ, ಪ್ರಸಾದನ-ಪಾರ್ವತೀಶ ಗಣಕಿಹಾಳ ಅವರು ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ವಿ.ತಿಮ್ಮಕ್ಕ ಕುಮಾರಸ್ವಾಮಿ, ಸದಸ್ಯರಾದ ಕೆ.ಟಿ.ಯರಿಸ್ವಾಮಿ, ಹಂಪಕ್ಕ ಶಿವರಾಮ, ಎಮ್.ಓಬಳಿಸ್ವಾಮಿ, ಅಂಜೀನಪ್ಪ.ಕೆ., ಎಸ್‌ಡಿಎಂಸಿ ಅಧ್ಯಕ್ಷ
ನಾಗರಾಜ್.ಎಮ್, ಮುಖ್ಯ ಶಿಕ್ಷಕ ರವಿ.ಕೆ, ಕಾರ್ಯಕ್ರಮ ಆಯೋಜಕರಾದ ಕೆ.ರವಿಕುಮಾರ್ ಶೆಟ್ಟರ್, ಓಬಳಿಸ್ವಾಮಿ, ಶಿಕ್ಷಕ ಶಿವಣ್ಣ.ಕೆ. ಗ್ರಾಮಸ್ಥರು ಸೇರಿದಂತೆ ಪ್ರಮುಖರು ಹಾಜರಿದ್ದರು.
ಹಾಸ್ಯ ಕಾರ್ಯಕ್ರಮ: ನಾಟಕ ಪ್ರಾರಂಭಕ್ಕೂ ಮುನ್ನ ಶಿಕ್ಷಕ ಯರಿಸ್ವಾಮಿ ಅಬರು ಹ್ಯಾಸ ಕಾರ್ಯಕ್ರಮ ನಡೆಸಿಕೊಟ್ಟರು.
———