ಧಾರವಾಡ: ಧಾರವಾಡದ ಗಣಕರಂಗ ಸಂಸ್ಥೆ ವಿಶ್ವ ಮಹಿಳಾ ದಿನಾಚರಣೆಯ ಅಂಗವಾಗಿ “ಸಂವಿಧಾನ ಮತ್ತು ಮಹಿಳೆ” ವಿಷಯದ ಕುರಿತ ಲೇಖನ ಸ್ಪರ್ಧೆಯನ್ನು ಏರ್ಪಡಿಸಿದೆ.
ಧಾರವಾಡದ ಗಣಕರಂಗ ಸಂಸ್ಥೆಯ ಮುಖ್ಯಸ್ಥ ಸಿದ್ದರಾಮ ಹಿಪ್ಪರಗಿ ಅವರ ಸಹಕಾರದೊಂದಿಗೆ, ಕಸಾಪ ಮಯೂರವರ್ಮ ಸಾಹಿತ್ಯ ಪ್ರಶಸ್ತಿ ಪುರಸ್ಕೃತ, ಕವಿ ಗಣಪತಿ ಗೋ ಚಲವಾದಿ(ಗಗೋಚ) ಅವರ ಸಂಯೋಜನೆಯ ಆಯೋಜಕತ್ವದಲ್ಲಿ ಮಾ. ೮ರಂದು “ಗಣಕರಂಗ ಲೇಖನ ಸ್ಪರ್ಧೆ” ವಾಟ್ಸಪ್ ಬಳಗದಲ್ಲಿ ಸಂಜೆ ೪ರಿಂದ ರಾತ್ರಿ ೧೦ರ ತನಕ ನಡೆಯಲಿದೆ.
ಶತ-ಶತಮಾನಗಳ ಕಾಲ ಸಂಪ್ರದಾಯದ ಹೆಸರಿನಲ್ಲಿ ಹಲವಾರು ಅಮಾನವೀಯ ಆಚರಣೆಗಳಿಂದ ಬಿಡುಗಡೆ ಪಡೆಯಲು ಮಹಿಳೆಯರು ಸ್ವತಂತ್ರ ಭಾರತಕ್ಕೆ ಬಾಬಾಸಾಹೇಬ ಡಾ.ಅಂಬೇಡ್ಕರ್ ವಿರಚಿತ ಸಂವಿಧಾನ ಜಾರಿಯಾಗುವವರೆಗೆ ಕಾಯಬೇಕಾಯಿತು. ಆಧುನಿಕ ಕಾಲಘಟ್ಟದಲ್ಲಿಯೂ ಮಹಿಳೆ ಹಲವಾರು ರಂಗಗಳಲ್ಲಿ ಯಶಸ್ವಿಯಾಗುತ್ತಿದ್ದರೂ ಸಾಂಪ್ರದಾಯಿಕ ಮನಃಸ್ಥಿತಿಯ ಸಾಮಾಜಿಕರಿಂದ ಹಲವಾರು ತೊಂದರೆ-ತಾಪತ್ರಯಗಳನ್ನು ಇಂದಿಗೂ ಎದುರಿಸಿಯೂ ಸ್ವಾವಲಂಭಿಯಾಗುತ್ತಿದ್ದಾಳೆಂದರೆ ಅದಕ್ಕೆ ಕಾರಣ ಭಾರತದ ವಿಶ್ವಮಾನ್ಯ “ಸಂವಿಧಾನ”. ಆದಾಗ್ಯೂ ಮಹಿಳೆಯರು ಸಂವಿಧಾನ ನೀಡಿದ ಹಕ್ಕು-ಭಾಧ್ಯತೆಗಳು, ಅಧಿಕಾರವನ್ನು ಅರಿತುಕೊಳ್ಳಲು ವಿಫಲವಾಗುತ್ತಿರುವುದು ಬೇಜಾರಿನ ಸಂಗತಿ. ಇಂಥಹ ಹಲವಾರು ಸಂಗತಿಗಳೊಂದಿಗೆ, ವಿವಿಧ ದೃಷ್ಟಿಕೋನಗಳೊಂದಿಗೆ, ವಿವಿಧ ಸಮಸ್ಯೆಗಳ ಮೇಲೆ ಸಂವಿಧಾನಾತ್ಮಕವಾಗಿ ಬೆಳಕು ಚೆಲ್ಲುವಂಥಹ ವೈಚಾರಿಕ, ಪ್ರಗತಿಪರ, ಜೀವಪರ ಸಂಗತಿಗಳನ್ನುಳ್ಳ ಲೇಖನಗಳನ್ನು ಸಹೃದಯ ಸ್ಪರ್ಧಾತ್ಮಕ ಇಚ್ಛೆಯುಳ್ಳ ಬರಹಗಾರರಿಂದ ಕನಿಷ್ಟ ೩೦೦ರಿಂದ ಗರಿಷ್ಟ ೪೦೦ ಶಬ್ದಗಳ ಮಿತಿಯಲ್ಲಿರುವ ಲೇಖನವನ್ನು ಆಹ್ವಾನಿಸಲಾಗಿದೆ. “ಸಂವಿಧಾನ ಮತ್ತು ಮಹಿಳೆ ಲೇಖನ” ಸ್ಪರ್ಧೆಯಲ್ಲಿ ಯಾವುದೇ ರೀತಿಯ ಅವಹೇಳನಕಾರಿ, ಯಾರನ್ನಾಗಲೀ ಅಪಮಾನಿಸುವ, ಸಮಾಜವಿರೋಧಿ, ಸಂವಿಧಾನ ವಿರೋಧಿ, ದೇಶದ ಭಾವೈಕ್ಯತೆಗೆ ದಕ್ಕೆ ತರುವ ವಿಷಯಗಳಿಗೆ ಅವಕಾಶವಿರುವುದಿಲ್ಲ. ಉತ್ತಮ ಲೇಖನಗಳನ್ನು ಮಾತ್ರ ಕಳುಹಿಸಬೇಕು.
ಪ್ರಥಮ, ದ್ವೀತಿಯ, ತೃತೀಯ ಬಹುಮಾನಿತರಿಗೆ ಪುಸ್ತಕ ಹಾಗೂ ವಿಶೇಷ ಉಡುಗೊರೆಗಳನ್ನು ಕಳುಹಿಸಿ ಕೊಡಲಾಗುವುದರ ಜೊತೆಗೆ ಭಾಗವಹಿಸಿದ ಎಲ್ಲರಿಗೂ ಇ-ಪ್ರಮಾಣಪತ್ರ ನೀಡಲಾಗುವುದು.
ತೀರ್ಪುಗಾರರ ಮೆಚ್ಚುಗೆ ಪಡೆದ ಐವರು ಬರಹಗಾರರ ಉತ್ತಮ ಲೇಖನಗಳಿಗೂ ಪುಸ್ತಕ ಬಹುಮಾನದ ಜತೆ ಗೌರವಿಸಲಾಗುವುದು ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಸಕ್ತರು ಸ್ಪರ್ಧೆಯ ಕುರಿತ ಹೆಚ್ಚಿನ ಮಾಹಿತಿಗಾಗಿ ಗಣಪತಿ ಗೋ ಚಲವಾದಿ (೯೭೪೦೬೯೧೪೨೯) ಮತ್ತು ಹಿಪ್ಪರಗಿ ಸಿದ್ದರಾಮ (೯೮೪೫೧೦೯೪೮೦) ಸಂಪರ್ಕಿಸ ಬಹುದು.
ಧಾರವಾಡದ ಗಣಕರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ: “ಸಂವಿಧಾನ ಮತ್ತು ಮಹಿಳೆ” ಕುರಿತ ಲೇಖನ ಸ್ಪರ್ಧೆ
One thought on “ಧಾರವಾಡದ ಗಣಕರಂಗ ಸಂಸ್ಥೆ ಸಹಯೋಗದಲ್ಲಿ ಆಯೋಜನೆ: “ಸಂವಿಧಾನ ಮತ್ತು ಮಹಿಳೆ” ಕುರಿತ ಲೇಖನ ಸ್ಪರ್ಧೆ”
Comments are closed.
ಧನ್ಯವಾದಗಳು ಅಣ್ಣಾವ್ರೇ…. ನಿಮ್ಮ ಪತ್ರಿಕಾ ಬೆಂಬಲವೇ ನಮಗೆ ಶಕ್ತಿವರ್ಧಕ…
ಜೈಭೀಮ್ ಶುಭದಿನ…
ಹಿಪ್ಪರಗಿ ಸಿದ್ಧರಾಮ
ಗಣಕರಂಗ, ಧಾರವಾಡ