ಬಳ್ಳಾರಿ: ನಗರದ ಯುವ ಉದ್ಯಮಿ ಮರ್ಚೇಡ್ ಮಲ್ಲಿಕಾರ್ಜುನಗೌಡ ಅವರಿಗೆ ಧಾರವಾಡದ ಕರ್ನಾಟಕ ವಿಶ್ವ ವಿದ್ಯಾಲಯ ಪಿಹೆಚ್‌ಡಿ ಪದವಿ ಘೋಷಿಸಿದೆ.
ಅವರು ಸಮಾಜ ವಿಜ್ಞಾನ ನಿಕಾಯದ ಮಾನವ ಶಾಸ್ತ್ರ ವಿಭಾಗದಲ್ಲಿ ಧಾರವಾಡದ ಕರ್ನಾಟಕ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ.ವಿ.ಜಗದೀಶ್ ಅವರ ಮಾರ್ಗದರ್ಶನದಲ್ಲಿ
“ಟೂರಿಸಂ ಅಂಡ್ ಹೆಲ್ತ ಆ್ಯನ್ ಅಂಥ್ರೋಪೊಲೋಜಿಕಲ್ ಸ್ಟಡಿ (ಎ ಕೇಸ್ ಸ್ಟಡಿ ಆಫ್ ಬಳ್ಳಾರಿ ಡಿಸ್ಟ್ರಿಕ್ಟ್ ಇನ್ ಕರ್ನಾಟಕ)” ವಿಷಯದಲ್ಲಿ ಮಂಡಿಸಿದ ಮಹಾ ಪ್ರಬಂಧಕ್ಕೆ ಪಿಹೆಚ್‌ಡಿ ಪದವಿ ಘೋಷಣೆ ಮಾಡಿದೆ.
ಇವರು ಪ್ರಸ್ತುತ ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವ ವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ ಹಾಗೂ ಹಲವು ಶಿಕ್ಷಣ ಸಂಸ್ಥೆಗಳನ್ನು ಹೊಂದಿದ್ದಾರೆ.
ನಗರದ ಮರ್ಚೇಡ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಕಾಲೇಜ್, ಜ್ಞಾನಾಮೃತ ಪಿಯು ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾಗಿದ್ದಾರೆ.
ಗೌಡರು ಎಬಿವಿಪಿ, ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಸಕ್ರೀಯ ಕಾರ್ಯಕರ್ತರು. ಮೂಲತಃ ಬಳ್ಳಾರಿ ತಾಲೂಕಿನ ಬೆಣಕಲ್ಲು ಗ್ರಾಮದ ರೈತ ಕುಟುಂಬದ ಕುಡಿ. ವರ್ಷಾ ಸಂಸ್ಥೆಯ ಮೂಲಕ ರಾಜ್ಯದ ನೂರಾರು ಹೋಬಳಿಗಳಲ್ಲಿ ರೈತರ ಕೃಷಿಗೆ ನೆರವಾಗಬಲ್ಲ ಕೃಷಿ ಯಂತ್ರೋಪಕರಣಗಳ ಮಾರಾಟ ಮತ್ತು ಬಾಡಿಗೆ ಆಧಾರಿತ ಕೇಂದ್ರಗಳನ್ನು ನಡೆಸುತ್ತಿದ್ದಾರೆ.
ಪ್ರವಾಸೋದ್ಯಮ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಎಂ. ಸಿ. ಗೌಡರು ಯಶಸ್ವಿಯಾಗಿ ಪಿ.ಎಚ್.ಡಿ ಪದವಿಗೂ ಭಾಜನರಾಗಿದ್ದಾರೆ.
ಈ ಸಂದರ್ಭದಲ್ಲಿ ಕರ್ನಾಟಕ ಕಹಳೆ ಡಾಟ್ ಕಾಮ್ ನ್ಯೂಸ್ ಪೋರ್ಟಲ್ ಜತೆ ಮಾತನಾಡಿದ ಗೌಡರು,
ತಮಗೆ ದೊರೆತ ಈ ಪಿಹೆಚ್‌ಡಿ ಪದವಿಯನ್ನು ತಮ್ಮ ತಂದೆ ದಿ. ಮರ್ಚೇಡ್ ಬಸವನಗೌಡ ಅವರಿಗೆ ಸಮರ್ಪಿಸಿರುವುದಾಗಿ ಹೇಳಿದರು.
ಅಭಿನಂದನೆ: ಧಾರವಾಡ ವಿವಿಯಿಂದ ಪಿ.ಎಚ್.ಡಿ ಪದವಿ ಪಡೆದ ಎಂ.ಸಿ.ಗೌಡರನ್ನು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಹಿರಿಯ ಪತ್ರಕರ್ತ ಸಿ.ಮಂಜುನಾಥ್ ಅಭಿನಂದಿಸಿದ್ದಾರೆ.
ಮರ್ಚೇಡ್ ಮಲ್ಲಿಕಾರ್ಜುನಗೌಡರಿಗೆ ಧಾರವಾಡ ವಿವಿಯಿಂದ ಪಿಹೆಚ್‌ಡಿ ಪದವಿ
One thought on “ಮರ್ಚೇಡ್ ಮಲ್ಲಿಕಾರ್ಜುನಗೌಡರಿಗೆ ಧಾರವಾಡ ವಿವಿಯಿಂದ ಪಿಹೆಚ್‌ಡಿ ಪದವಿ ”
Comments are closed.
Hearty congratulations goudare, it’s positive leap in your life.great sor