- ಕವಿ ಎಂ.ತ್ರಿ ಅವರ ಕಿರು ಪರಿಚಯ
ಹೆಸರು: ಮೈನೋದ್ದಿನ. ಎಂ. ಮುಲ್ಲಾ*
ಕಾವ್ಯ ನಾಮ: ✍🏻ಎಂ.ತ್ರಿ
ವಿದ್ಯಾರ್ಹತೆ:ಎಂ. ಎ(ಕನ್ನಡ), ಬಿ.ಇಡಿ, ಡಿ.ಇಡಿ, (ಹಿಂದಿ- ಭಾಷಾ ಪ್ರವೀಣ ಪದವಿ)
ಸ್ವಂತ ಊರು :ಮಾಶಾಳ(ಜಿ. ಕಲಬುರ್ಗಿ)
ಪ್ರಸ್ತುತ ವಾಸ : ಆಲಮೇಲ, ತಾ/ ಸಿಂದಗಿ. ಜಿ.ವಿಜಯಪುರ
ವೃತ್ತಿ : ಶಿಕ್ಷಕರು, ಸ. ಮಾ. ಪ್ರಾ. ಶಾಲೆ ಆಲಮೇಲ. ತಾ /ಸಿಂದಗಿ, ಜಿ. ವಿಜಯಪುರ-೫೮೬೨೦೨
ಪ್ರವೃತ್ತಿ :ಕವಿ_ಸಾಹಿತಿ_ವಿಮರ್ಶಕ*
ಸಾಹಿತ್ಯ ಕ್ಷೇತ್ರದಲ್ಲಿ ಸೇವೆ: #ಸಂಘಟನಾ ಕಾರ್ಯದರ್ಶಿ
ಚು. ಸಾ. ಪ. ಅಫಜಲಪೂರ
#ಕಾರ್ಯಕಾರಿ ಸಮಿತಿ ಸದಸ್ಯರು
ಕ. ಸಾ. ಪ ಅಫಜಲಪುರ
#ಸಹ ಕಾರ್ಯದರ್ಶಿ
ಕ. ಜ. ಸಾ. ಪ ಆಲಮೇಲ
# ಹೋಬಳಿ_ತಾಲ್ಲೂಕು_ಜಿಲ್ಲಾ_ರಾಜ್ಯ_ಅಂತರ ರಾಜ್ಯ ಮಟ್ಟದ ಕವಿಗೋಷ್ಠಿಗಳಲ್ಲಿ ಭಾಗವಹಿಸಿದ್ದಾರೆ.
#ವಿದ್ಯಾರ್ಥಿ ಜೀವನದಿಂದಲೇ ಚುಟುಕು ಕವಿ,
*ಆಶು ಕವಿ* ಎಂಬ ಬಿರುದು.
#ಇಲ್ಲಿಯವರೆಗೆ ಸುಮಾರು ೧೦೦೦ ಕ್ಕಿಂತಲೂ ಹೆಚ್ಚು ಚುಟುಕುಗಳು ಕನ್ನಡಾಂಬೆಗೆ ಅರ್ಪಿಸಿದ್ದಾರೆ.
#ಸುಮಾರು ೨೫೦ ಕವನಗಳು ರಚಿಸಿದ ಹೆಗ್ಗಳಿಕೆ ಇವರದು.
#ಸಾಹಿತ್ಯ_ಸುಧೆ_ವಿಜಯಪುರ* ಎಂಬ #ಫೆಸ್ಬುಕ್ ಸಾಹಿತ್ಯ ಬಳಗದ #ಸಂಸ್ಥಾಪಕ, #ನಿರ್ವಾಹಕ.
ಈ ಮೂಲಕ ಕನ್ನಡ ಕವಿ #ಮನಸುಗಳಲ್ಲಿ ಸ್ಥಳಾವಕಾಶ.
#ಕನ್ನಡವೆಂದರೆ ಪಂಚ ಪ್ರಾಣ, ಕನ್ನಡವೇ ನನ್ನುಸಿರು ಕನ್ನಡದಿಂದಲೇ ನನಗೆ ಹೆಸರು ಎಂದು ಎಂ.ತ್ರಿ ಪ್ರೀತಿಯಿಂದ ಕರೆದುಕೊಳ್ಳುತ್ತಾರೆ.
#ವೃತ್ತಿ ಬದುಕಿನಲ್ಲಿ ನಾನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ ಅನುಭವ, ಬಸ್ ಕಂಡಕ್ಟರ್, ಪೋಲಿಸ್, ಶಿಕ್ಷಕ, ಸಿ. ಆರ್. ಪಿ. ಈ ಹುದ್ದೆಗಳ ಅನುಭವಾಮೃತವೇ ಸಾಹಿತ್ಯಕ್ಕೆ ಮುನ್ನುಡಿ ಎಂದು ವಿನೀತರಾಗಿ ಹೇಳುತ್ತಾರೆ ಎಂ.ತ್ರಿ
#ಚಿತ್ರಕಲೆ, ಟೈಲರಿಂಗ್, (ಜೇಂಟ್ಸ್ ಆಂಡ್ ಲೇಡಿಜ್), ಅಭಿನಯ, ಇವು ಕವಿ ಎಂ.ತ್ರಿ ಅವರ ನೆಚ್ಚಿನ ಇತರ ಹವ್ಯಾಸಗಳು…..
*****
ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಎಂ.ತ್ರಿ ಅವರು ವಿಶ್ವ ಮಹಿಳಾ ದಿನಾಚರಣೆ ಅಂಗವಾಗಿ ರಚಿಸಿದ ‘ಹೆಣ್ಣು ಬಾಳ ಕಣ್ಣು’ ಕವಿತೆ ಪಾತ್ರವಾಗಿದೆ…👇
ಹೆಣ್ಣು ಬಾಳ ಕಣ್ಣು!
————
ಹೆಣ್ಣು, ಹೆಣ್ಣೆಂದೇಕೆ
ಇಂದಿಗೂ ಗೊಣಗುವಿರಿ ಹೆಣ್ಣು ಹಡೆದರೆ ಬಾಳು ಗೋಳು ಅನ್ನುವಿರಿ ಅವಳಿಲ್ಲದೆ ನಮ್ಮ ಬಾಳಿಲ್ಲ! ಹೆಣ್ಣು ಬಾಳಿನ ಕಣ್ಣು ಎಂಬುದು ಮರೆತಿರುವಿರಿ!!
ಅಮ್ಮನ, ಸ್ಥಾನವನ್ನು ಆ ಬ್ರಹ್ಮನೂ ತುಂಬುವುದಿಲ್ಲ ಅಕ್ಕ, ತಂಗಿ, ಅತ್ತೆ, ಅತ್ತಿಗೆ, ಮಗಳಾಗಿ,
ಮಡದಿಯಾಗಿ ಗಂಡಿನ ಬಾಳು ಬೆಳಗುವಳು ಹೀಗೆ ಹತ್ತು, ಹಲವು ಪಾತ್ರ ವಹಿಸುವ ನಾಯಕಿ ಇವಳು!
ಹೆಣ್ಣಿಲ್ಲದ ಬಾಳು, ಊಹಿಸಿ ನೋಡಿ
ಆಗ ಅವಳ ಅಸ್ತಿತ್ವದ ಅರಿವಾಗುವುದು
ಹಾಗಂತ ಗಂಡಿಗೆ, ಕಡೆಗಣಿಸುತ್ತಿಲ್ಲ!
ಅವಳಿಗೆ ಕಡೆಗಣಿಸುತ್ತಿರುವದರಿಂದ
ತಿವಿದು, ತಿಳಿಸಲು ಬರೆದ ಸಾಲುಗಳಿವು!
ಹೆಣ್ಣುಗಂಡುಗಳೆರಡೂ ಜೀವಗಳು
ಬಾಳ ಬಂಡಿಯ ಎರಡು ಚಕ್ರಗಳು!!…..
-✍🏻ಎಂ.ಎಂ.ಮುಲ್ಲಾ
ಕವಿ-ಶಿಕ್ಷಕರು,
ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಆಲಮೇಲ. ತಾ/ಸಿಂದಗಿ. ಜಿ/ ವಿಜಯಪುರ.