ಅನುದಿನ ಕವನ-೭೯ ಕವಯತ್ರಿ: ಧರಣೀಪ್ರಿಯೆ, ದಾವಣಗೆರೆ ಕವನ ಶೀರ್ಷಿಕೆ:ಗುಬ್ಬಿಮರಿ

ಪ್ರತಿ ವರ್ಷ ಮಾ.20 ರಂದು ವಿಶ್ವ ಗುಬ್ಬಚ್ಚಿ ದಿನವನ್ನು ಆಚರಿಸಲಾಗುತ್ತಿದೆ. ಈ ಹಿನ್ನಲೆಯಲ್ಲಿ ಗುಬ್ಬಿಮರಿ ಕುರಿತು ಕವಯತ್ರಿ ದಾವಣಗೆರೆಯ ಧರಣೀಪ್ರಿಯೆ ಅವರು ಕವಿತೆ ರಚಿಸಿದ್ದಾರೆ.
ಇಂದಿನ ‘ಅನುದಿನ ಕವನ’ ದ ಗೌರವಕ್ಕೆ ಗುಬ್ಬಿಮರಿ ಪಾತ್ರವಾಗಿದೆ.👇

ಗುಬ್ಬಿಮರಿ
*********
ಚಿವ್ ಚಿವ್ ಗುಬ್ಬಿ
ಚಿನ್ನಾರಿ ಗುಬ್ಬಿ
ಕಾಳನುಹುಡುಕುತ
ಮೇಲಕೆ ಹಾರುತ!

ಅಲೆಯುತ ನಲಿಯುತ
ಕಂಗಳ ಅರಳಿಸುತ
ಊರೂರ ಸುತ್ತುತ
ಹೊಲ ಗದ್ದೆಯ ನೋಡುತ!

ಮರಿಗಳ ಸಾಕಲು
ಹೊಟ್ಟೆಯ ತುಂಬಲು
ಸಂಗವ ಬಯಸುತ
ಸ್ನೇಹವ ಬೆಸೆಯುತ!

ಬೂದಿ ಕಂದಿನ ಬಣ್ಣದಲಿ
ಕಪ್ಪನೆ ಕೆಂಪನೆ ಕಣ್ಣಿನಲಿ
ಸಣ್ಣಯ ಪುಕ್ಕವು
ಕಾಲುಗಳು ಸಣ್ಣವು!

ಬಾರಾ ಬಾರಾ ಗುಬ್ಬಚ್ಚಿ
ಚೆಲುವನು ತೋರಾ ಗುಬ್ಬಚ್ಚಿ
ನನ್ನಯ ಜೊತೆಯಲಿ ಆಡಲು ಬಾ
ಕಾಳು ಹಣ್ಣನು ಕೊಡುವೆನು ಬಾ!!

-ಧರಣೀಪ್ರಿಯೆ, ದಾವಣಗೆರೆ