ಅನುದಿನ ಕವನ-೮೦ ಯುವಕವಿ:ಶ್ರೀಕಾಂತ್ ಮಳೆಗಲ್, ಕವನದ ಶೀರ್ಷಿಕೆ: ಕವಿತೆಯೆಂದರೆ & ನನ್ನ ಕವಿತೆ

ಮಳೆಗಲ್’ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿರುವ ಶ್ರೀಕಾಂತ ಎಸ್ ಟಿ ಭರವಸೆಯ ಕವಿ.
ಯುವ ಕವಿಗೆ ಭಾರತರತ್ನ ಡಾ.‌ಬಿ ಆರ್ ಅಂಬೇಡ್ಕರ್ ಅವರೇ ಸ್ಫೂರ್ತಿ.
ಕನಸು ಮತ್ತು ಅಂಬೇಡ್ಕರ್ ಕಾವ್ಯ ಕವನ ಸಂಕಲನಗಳನ್ನು ಪ್ರಕಟಿಸಿರುವ ಶ್ರೀಕಾಂತ್ ಅವರಿಗೆ
ಸಾಮಾಜಿಕ ವಿನ್ಯಾಸದಲ್ಲಿ ಬರಹಗಳು ರೂಪುಗೊಳ್ಳಲು ಸಂವಿಧಾನ ಶಿಲ್ಪಿ ಬಾಬಾ ಸಾಹೇಬ ಅಂಬೇಡ್ಕರ್ ರವರೇ ಸ್ಪೂರ್ತಿಯಂತೆ.
ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಮತ್ತು ರೂಪನಗುಡಿಯ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ಅತಿಥಿ ಉಪನ್ಯಾಸಕನಾಗಿ ಕರ್ತವ್ಯ ನಿರ್ವಹಿಸಿದ ಅನುಭವವಿರುವ ಮಳೆಗಲ್ ಸಾಹಿತ್ಯ ಚಟುವಟಿಕೆಯಲ್ಲಿ ಸಂತೋಷ ಕಾಣುತ್ತಿದ್ದಾರೆ.
ಕವಿತೆ, ಲೇಖನ ರಚನೆ, ಅಧ್ಯಯನ ಮತ್ತು ಸಂಗೀತದಲ್ಲೂ
ಅಭಿರುಚಿಯನ್ನು ಹೊಂದಿದ್ದಾರೆ.
‘ವಿಶ್ವ ಕಾವ್ಯ ದಿನದ’ ಅಂಗವಾಗಿ ರಚಿಸಿರುವ ಕವಿತೆಯೆಂದರೆ….ಹಾಗೂ ನನ್ನ ಕವಿತೆ ಇಂದಿನ ‘ಅನುದಿನ ಕವನ’ದ ಗೌರವಕ್ಕೆ ಪಾತ್ರವಾಗಿವೆ…👇👇

1..ಕವಿತೆಯೆಂದರೆ……..?

ಕವಿತೆ ಕವಿಯ ಮನದ ದರ್ಶನ
ಮಧುರ ಮಾತುಗಳ
ಸವಿಯುವ ಬೆಳಂದಿಗಳ ಶಶಿ

ಕವಿತೆ ನನ್ನೆದೆಯ ಆಲಾಪ
ಮೌನದ ಕಡಲು
ನನ್ನವಳ ಕಾಡುವ ಅಮಲು

ಕವಿತೆ ಬರೆಯಲು ಸುಲಭ
ಬರೆಯುವಾಗ ಕವಿಯ ಕಲ್ಪನೆ ಅನನ್ಯ
ಸಂಗತಿ ನೂರು
ಅರಿಯದ ಪದಗಳ ಗಮಕ ಸಾವಿರಾರು

ಮನಸ್ಸಿನ ವಿರಹದ ಘಮಲಿಗೆ
ಮಂಪರು ಕವಿತೆ
ಕಾಡುವ ನೆನಪಿಗೆ ಈ ನನ್ನ ಕವಿತೆ ಸ್ಪೂರ್ತಿಯ ಒಡಲು
*****

2.ನನ್ನ ಕವಿತೆ……….!!!

ಕವಿತೆ ಕನಸಿನ ಮಿಡಿತ
ಕವಿತೆ ಮೌನದ ಹೂರಣ
ಕವಿತೆ ಪ್ರಣತಿ
ಕವಿತೆ ಒಲವಿನ ಓಲೆ
ಕವಿತೆ ಆಲಾಪ
ಕವಿತೆ ಭಾವನೆಯ ರೂಪ
ಕವಿತೆ ಮುಗ್ದ ಸಾಂಗತ್ಯ
ಕವಿತೆ ಕನವರಿಕೆ
ಕವಿತೆ ಎರಡು ಕನಸು
ಕವಿತೆ ಬಯಕೆ
ಕವಿತೆ ನಿವೇದನೆ
ಕವಿತೆ ವಿರಹ
ಕವಿತೆ ತಲ್ಲಣ
ಕವಿತೆ ತೀವ್ರತೆ
ಕವಿತೆ ನೆನಪು
ಕವಿತೆ ಇರುವಿಕೆ
ಕವಿತೆ ಜೀವನ
ಕವಿತೆ ತನ್ಮಯ
ಕವಿತೆ ಭಾವ ಲಹರಿ
ಕವಿತೆ ವರ್ಣನೆ
ಕವಿತೆ ಭಾವನೆಗಳ ಗುಚ್ಚ
ಕವಿತೆ ಸಂಕಲ್ಪ
ಕವಿತೆ ಅನನ್ಯ
ಕವಿತೆ ಬಂಧನ
ಒಟ್ಟಾರೆ ಕವಿತೆ ಅನಂತ ಮಧುರ ಮಿಲನ.

-ಶ್ರೀಕಾಂತ ಮಳೆಗಲ್,ಬಳ್ಳಾರಿ