ಇಂದು ವಿಶ್ವ ಜಲ ದಿನ. ಚಿತ್ರಗಳ ಮೂಲಕ ಜಲ ಜಾಗೃತಿ ಮೂಡಿಸುತ್ತಿರುವ ನಾಮದೇವ ಕಾಗದಗಾರ

ಇಂದು ವಿಶ್ವ ಜಲ ದಿನ…..
ಈ ಹಿನ್ನಲೆಯಲ್ಲಿ ಚಿತ್ರಕಲಾವಿದ ಅವರ ಟಿಪ್ಪಣಿ ಹಾಗೂ ಚಿತ್ರಗಳನ್ನು ಕರ್ನಾಟಕ ಕಹಳೆ ಡಾಟ್ ಕಾಮ್ ಪ್ರಕಟಿಸಿದೆ…
ಪ್ರತಿಯೊಬ್ಬರೂ ನೀರನ್ನು ಉಳಿಸೋಣ…👇
(ಸಂಪಾದಕ)
*****
Please save water!
Please save water!!
Please save water!!!
ನೀರು ಉಳಿಸಿಕೊಳ್ಳಿ……

ನೀರು ಉಳಿತಾಯದ ಆಚರಣೆ” ಇಂದಿನ ವಿಶ್ವ ಜಲ ದಿನಕ್ಕೆ ಮೀಸಲಾಗದೇ ದಿನನಿತ್ಯದ ಆಚರಣೆಯಾಗಬೇಕು.. ಕಡ್ಡಾಯವಾಗಿ ಜಾರಿಗೆ ತರಬೇಕು..ನಮ್ಮನ್ನೂ ನಿಮ್ಮನ್ನೂ ಸೇರಿ ಇಲಾಖೆಗಳು, ಸಂಘ ಸಂಸ್ಥೆಗಳಲ್ಲಿ ಎಂದೂ ಇಲ್ಲದ್ದು ಇಂದಿನ ದಿನ ಮಾತ್ರ “ನೀರು ಉಳಿತಾಯದ ಬಗ್ಗೆ ಜಾಗೃತಿ, ಪ್ರೀತಿ, ಕಾಳಜಿ ಮಾತ್ರ ಬಹಳಷ್ಟು ಎದ್ದು ಕಾಣುತ್ತದೆ. ಪುಕ್ಕಟ್ಟೇ ಭಾಷಣ ಬಿಗಿದು, ಬ್ಯಾನರ್ಸ್ , ಫಲಕ ಹಿಡಿದು ಒಂದಿಷ್ಟು ಜಾಗೃತಿ ಮೂಡಿಸಿ ಪ್ರಚಾರಕ್ಕೆ ಮಾತ್ರ ಸೀಮಿತರಾಗಿ ಬಿಡುತ್ತೇವೆ.. ಮತ್ತೇ ಮುಂದಿನ ಇದೇ ಮಾರ್ಚ 22 ಕ್ಕೆ ಕಾಯುತ್ತೇವೆ…
ಒಂದು ತೊಲೆ ಬಂಗಾರ ನೀಡುವೆ ಒಂದು ಹನಿ ನೀರು ಕೊಡಿ ಎಂದರೂ ನೀರು ಸಿಗದ ಪರಿಸ್ಥಿತಿ ಎದುರಾಗುವುದನ್ನು ಸದ್ಯದಲ್ಲಿಯೇ ಕಾಣುತ್ತೇವೆ…ರೇಶನ್ ಅಂಗಡಿಯ ಮುಂದೆ ನೀರು ಖಾಲಿಯಾಗಿದೆ ಮುಂದಿನ ತಿಂಗಳು ಬನ್ನಿ ಎಂಬ ಬೋರ್ಡ್ ಕಾಣುತ್ತೇವೆ…… ಈಗಿನಿಂದಲೇ ಎಚ್ಚರಗೊಳ್ಳೋಣ..
****                                                                ಪ್ರಸ್ತುತ ಜನ ಎದುರಿಸುತ್ತಿರುವ ಗಂಭೀರ ಪರಿಸ್ಥಿತಿ ಕುರಿತಾಗಿ ನಾಮದೇವ ಕಾಗದಗಾರ ಅವರು ಚಿತ್ರಿಸಿದ ಚಿತ್ರಗಳು ಗಮನಸೆಳೆಯುತ್ತಿವೆ…