ಅನುದಿನ ಕವನ-೮೬. ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ ಕವನದ ಶೀರ್ಷಿಕೆ: ಜನಮದಿನ ಶುಭದ ಘಳಿಗೆಯು

ಬಳ್ಳಾರಿ ವಲಯದ ಐಜಿಪಿ, ಸಾಹಿತಿ, ಸಂಶೋಧಕ ಶ್ರೀ ಎಂ ನಂಜುಂಡಸ್ವಾಮಿ ಅವರ ವ್ಯಕ್ತಿತ್ವವನ್ನು ಪರಿಚಯಿಸುವ ‘ಜನುಮ ದಿನ ‘ಶುಭದ ಘಳಿಗೆಯು’ ಕವಿತೆಯನ್ನು ಭಾಮಿನಿ ಷಟ್ಪದಿಯಲ್ಲಿ ರಚಿಸುವ ಮೂಲಕ ಕವಿಯೂ ಆಗಿರುವ ಮನಂ ರವರಿಗೆ 51ನೇ ಹುಟ್ಟು ಹಬ್ಬದ ಶುಭಾಶಯ ಕೋರಿದ್ದಾರೆ ದಾವಣಗೆರೆಯ ಕವಯತ್ರಿ ಧರಣೀಪ್ರಿಯೆ ಅವರು👇
******************************

ಜನುಮ ದಿನ ಶುಭದ ಘಳಿಗೆಯು…
(ಭಾಮಿನಿ ಷಟ್ಪದಿಯಲ್ಲಿ)

ಜನುಮ ದಿನವಿದು ಶುಭದ ಘಳಿಗೆಯು
ಮನೆಯ ಮಂದಿಯ ಹರಕೆಯಿಂದಲಿ
ದಿನವು ಕೆಲಸದಿ ಜಯವಸಾಧಿಸಿ ಹೆಸರು ಮಾಡಿದಿರಿ!
ಮನದಿ ಹರುಷವ ತುಂಬಿ ಕೊಳ್ಳುತ
ಮನೆಯ ಮಂದಿಯ ಸೌಖ್ಯ ಬೇಡುತ
ಮನದಿ ದೇವರ ನೆನೆದು ಕೊಳ್ಳುತ ದಿನವಕಳೆದಿರಲು!!

ದೊರೆವ ಪುಸ್ತಕಗಳನು ಪಠಿಸುತ
ಬೆರೆತು ಕೆಲಸದ ಜೊತೆಗೆ ಹರುಷದಿ
ಚಿರದಲುಳಿಯುವ ಕವನ ಬರೆಯಲು ಹಾಡಿ ನಲಿದಿಹರು!
ಬರೆದು ನಾನಾ ಬಗೆಯ ಲೇಖನ
ನೆರೆದ ಜನಮನ ಮೆಚ್ಚಿಕೊಂಡರು
ಮೆರೆದು ನಾಮವು ಹರಡಿಕೊಂಡಿತು ರಾಜ್ಯದಾದ್ಯಂತ!!
“ಮನಂ “ನಾಮದಿ ಕಾವ್ಯ ಲೋಕದಿ
ಮನದಿ ನೆಲೆಸುತ ವಾಕ್ಯ ಘೋಷಿಸಿ
ದಿನವು ಹೇಳಲು ನಾವು ಭಾರತಿಯರೆನುತಿರಲುನೀವ್!
ಮನೆಯವರೆನುತ ಕಂಡು ನಿಮ್ಮ ಜೊತೆಗಿನ
ಜನರ ಕುಶಲವ ಕೇಳಿ ಹರಸುತ
ಮನನ ಮಾಡಲು ಜನರ ಮನದಲಿ ಸರಳ ಜೀವನದಿ!!

ಐಜಿಪಿ ಉನ್ನತಾಧಿಕಾರಿಯಾಗಿಯು
ರುಜುವು ಜನಮನದಲ್ಲಿ ಸ್ವಾಮಿಯು
ಭಜಿಸುವಂತೆಯೆ ನಾಡ ಜನತೆಯು ದೊಡ್ಡಗುಣದವರು!
ಸಜೆಯ ಕೊಡುತಲಿ ದುಷ್ಟಜನತೆಗೆ
ನಿಜವು ನಿಮ್ಮಯ ನುಡಿಯು ಚೆಂದವು
ಸೃಜನ ಶೀಲತೆಯಿಂದ ಸಾಗಲು ನಿತ್ಯ ಸೇವೆಯಲಿ!!

ಜಗದಿ ನಿಮ್ಮಯ ಕೆಲಸದೊಡ್ಡದು
ಸಿಗುವ ಸಮಯದಿ ಕಲೆಯಬೆಳೆಸುತ
ಸೊಗಸು ಸುಂದರ ನಿಮ್ಮ ಜೀವನ ಹೀಗೆ ಸಾಗಿರಲಿ!
ನಗುವು ತುಂಬಿದ ಮೊಗವು ಸುಂದರ
ಮಿಗಿಲು ನಿಮ್ಮಯ ಕಾರ್ಯವೈಖರಿ
ಸಿಗಲು ಕವನವ ಬರೆವ ಸಮಯವು ಧರಣಿ ನಮಿಸಿದೆನು!!

-ಧರಣೀಪ್ರಿಯೆ
ದಾವಣಗೆರೆ
*****
🖕 ಧರಣೀಪ್ರಿಯೆ ಅವರ ಸಾಹಿತ್ಯಕ್ಕೆ ರಾಗ ಸಂಯೋಜನೆ‌ ನೀಡಿ ಸಂಗೀತಪ್ರಿಯರಿಗೆ ಶಾರದ ಕೊಪ್ಪಳ ಮತ್ತು ತಂಡ ಮುದ ನೀಡಿದೆ….
*****
ಸಾಹಿತ್ಯ: ಧರಣೀಪ್ರಿಯೆ, ದಾವಣಗೆರೆ

ರಾಗ ಸಂಯೋಜನೆ & ಗಾಯನ:
ಶಾರದ ಮಂಜುನಾಥ್, ಸಂಗೀತ ಶಿಕ್ಷಕಿ, ಹಗರಿಬೊಮ್ಮನಹಳ್ಳಿ

ತಬಲ: ಸಿ.ಕೊಟ್ರೇಶ್, ಮೋರಿಗೆರೆ, ಹ ಬೊ ಹಳ್ಳಿ ತಾ.

ಸಹ(ವೃಂದ)ಗಾಯನ: ಸಂಜನಾ ಆರ್, ಭೂಮಿಕಾ ಕೆ , ಪ್ರಿಯಾಂಕಾ ಕೆ ಆರ್, ರೋಹಿಣಿ, ವಿದ್ಯಾ ಜಿ, ಪೂಜಾ ಎಂ
ಮೊರಾರ್ಜಿ ದೇಸಾಯಿ ವಸತಿ ಶಾಲೆ…ವಲ್ಲಭಾಪುರ
ಹ ಬೊ ಹಳ್ಳಿ ತಾ.ವಿಜಯನಗರ ಜಿ.

ನಿರ್ಮಾಣ:
ಬಳ್ಳಾರಿ ಮೀಡಿಯಾ ಹೌಸ್, ಬಳ್ಳಾರಿ

*****