ಬಳ್ಳಾರಿ: ಕರ್ನಾಟಕ ಏಕೀಕರಣಕ್ಕಾಗಿ ಹುತಾತ್ಮರಾದ ಪೈಲ್ವಾನ್ ರಂಜಾನ್ ಸಾಬ್ ಅವರು ಸೇರಿದಂತೆ ದೇಶ, ನಾಡು ನುಡಿಗೆ ಅನುಪಮ ಸೇವೆಸಲ್ಲಿಸಿದ ಆರು ಜನ ಗಣ್ಯ ಸಾಧಕರ ಪುತ್ಥಳಿಗಳನ್ನು ನಗರದ ವಿವಿಧ ಸ್ಥಳಗಳಲ್ಲಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಪ್ರತಿಷ್ಠಾಪಿಸಲಿದೆ ಎಂದು ಬೂಡಾ ಅಧ್ಯಕ್ಷ ದಮ್ಮೂರು ಶೇಖರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಸಾವಿತ್ರಿಭಾಯಿ ಫುಲೆ, ಸ್ವಾಮಿ ವಿವೇಕಾನಂದ, ಡಾ. ಜೋಳದರಾಶಿ ದೊಡ್ಡನಗೌಡ, ಹರಗಿನಡೋಣಿ ಚನ್ನಬಸವನಗೌಡರು ಹಾಗೂ ಬಹದ್ದೂರು ಶೇಷಗಿರಿರಾವ್ ಅವರ ಪುತ್ಥಳಿಗಳನ್ನು ಸ್ಥಾಪಿಸಲು ಈಚೆಗೆ ಜರುಗಿದ ಪ್ರಾಧಿಕಾರದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಖಾಸಗಿ ಪ್ರಾಯೋಜಿಕತ್ವದಲ್ಲಿ ಪ್ರಾಧಿಕಾರ ಆರು ಪುತ್ಥಳಿಗಳಲ್ಲಿ ಕಸಾಪ ಕಚೇರಿ ಆವರಣದಲ್ಲಿ ಪೈಲ್ವಾನ್ ರಂಜಾನ್ ಸಾಬ್ ಮತ್ತು ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದ ಆವರಣದಲ್ಲಿ ಡಾ. ಜೋಳದರಾಶಿ ದೊಡ್ಡನಗೌಡ ಅವರ ಪುತ್ಥಳಿಗಳನ್ನು ಸ್ಥಾಪಿಸಲು ಅನುಮತಿ ಸಿಕ್ಕಿದೆ ಎಂದರು.