ಬಳ್ಳಾರಿ; ದೇಹದ ನ್ಯೂನ್ಯತೆ ಸಾಧನೆಗೆ ಎಂದೂ ಅಡ್ಡಿಯಾಗಲಾರದು ಎಂದು ನಡೆದಾಡುವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಶಂಕರ ಉಮರಾಣಿ ಹೇಳಿದರು.
ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ಅವರು ಉಪನ್ಯಾಸ ನೀಡಿದರು.
ಶ್ರದ್ಧೆ, ಏಕಾಗ್ರತೆ, ಛಲ ನಮ್ಮನ್ನು ಸಾಧಕರನ್ನಾಗಿಸುತ್ತದೆ.
ವಿದ್ಯಾರ್ಥಿಗಳು ದೊಡ್ಡ ಗುರಿಯೊಂದಿಗೆ ಮುನ್ನಡೆದಾಗ ದೇಶದ ಆಸ್ತಿ ಯಾಗಬಲ್ಲರು ಎಂದು ತಿಳಿಸಿದರು.
ಪ ಪೂ ಶಿ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ ಅವರು ಮಾತನಾಡಿ, ನಾಡಿನ ಹಿರಿಯ ಸಾಧಕರ ಜೀವನ ಚರಿತ್ರೆ, ಬಸವರಾಜ ಅವರಂತಹ ಸಾಧಕರ ಮಾತುಗಳು ಸ್ಪೂರ್ತಿಯಾಗಿ ತೆಗೆದುಕೊಂಡು ವಿದ್ಯಾರ್ಥಿಗಳು ಅಧ್ಯಯನಶೀಲರಾಗಿ ಜೀವನದಲ್ಲಿ ಯಶಸ್ಸು ಕಾಣಬೇಕು ಎಂದರು.
ಪಠ್ಯ ಪುಸ್ತಕದೊಂದಿಗೆ ಪೂರಕವಾದ ಪುಸ್ತಕ ಗಳನ್ನು ಓದಿ ಜ್ಞಾನ ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಕೆ.ಎಂ ಮಹಾಲಿಂಗನ ಗೌಡ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅಂಕಗಳ ಜತೆಗೆ ವಿದ್ಯಾರ್ಥಿಗಳ ಜ್ಞಾನದ ಪರಧಿ ಬೆಳಗಿದಾಗ ಉನ್ನತ ಹುದ್ದೆಗಳು ತಮ್ಮನ್ನು ಅರಸಿಕೊಂಡು ಬರಲಿವೆ ಎಂದು .ಹೇಳಿದರು.
ಹಿರಿಯ ರಂಗ ಕಲಾವಿದ ಪುರುಷೋತ್ತಮ ಹಂದ್ಯಾಳ್, ಉಪನ್ಯಾಸಕರಾದ ಚಾಂದ್ ಪಾಷಾ, ಮಲ್ಲಿಕಾರ್ಜುನ ಗೌಡ, ಡಾ.ಯು.ಶ್ರೀನಿವಾಸ ಮೂರ್ತಿ, ಸಂಗಮೇಶ್ವರ, ಅಮರೇಶ ಸಜ್ಜನ್ ಇದ್ದರು.
*****