ಬೆವರಿಜಳು ಲಕುಮಿ
********
ಕರಾಗ್ರೇ ವಸತೇ ಲಕ್ಷ್ಮಿ
ಎಂದರು-ಶುದ್ಧರು.
ಕೈ ಕೆಸರಾದರೆ ಬಾಯಿ ಮೊಸರು
ಎಂದರು_ಶೂದ್ರರು.
ತುಳಿದರೂ ಸವಿಯದ ಹಾದಿಯಲ್ಲಿ
ರಿಕ್ಷಾಚಾಲಕನ ಬೆವರು
ಒಂದೊಂದು ರೂಪಾಯಿ ಪೇರಿಸಿ
ಜೇಬಲ್ಲಿ ಭದ್ರವಾಗಿರಿಸಿದಾಗ
ಲಕ್ಷ್ಮಿ ಬೆವರಲ್ಲಿ ಜನಿಸುವಳು
ಅನ್ನಿಸುವುದಿಲ್ಲವೆ ?
ಮಳೆ ಬರುವ ಮುನ್ನವೇ
ಬೆವರು ಸುರಿಸಿ,ಇಳೆ ಹದ ಮಾಡುವ
ರೈತ ಬೆಳೆದ ಅನ್ನದಲ್ಲಿ ಲಕ್ಷ್ಮಿ ಇದ್ದಾಳೆ
ಅಂದ ಮೇಲೆ ಲಕ್ಷ್ಮಿ ಬೆವರಲ್ಲಿ
ಜನಿಸಿದವಳು ಅನ್ನಿಸುವುದಿಲ್ಲವೆ ?
ರಾತ್ರಿಯಲಿ ಭಯಬಿಟ್ಟು ನಿದ್ದೆ ನೀಡುವ
ನಮ್ಮ ಮನೆಗಳ ಕಾಯುವ ಗೂರ್ಖನ
ಸಿಳ್ಳೆಯಲ್ಲೇ..ಮನೆ ಮನೆ ಯಿಂದ
ಸಂಗ್ರಹಿಸಿದ್ದ ರೂಪಾಯಿ ನಾಣ್ಯಗಳಲ್ಲಿ
ಲಕ್ಷ್ಮಿ ಇದ್ದಾಳೆ ಅಂದದ ಮೇಲೆ
ಲಕ್ಷ್ಮಿ ಕಾಯಕ ಜ ಅಲ್ಲವೇ?
ಬೆವರಿನಲ್ಲೇ ಹುಟ್ಟುವೆನೆಂಬ
ಲಕ್ಷ್ಮಿ ಯನ್ನು
ಲಂಗು-ಲಗಾಮಿಲ್ಲದೆ
ಹಣದಾಸೆಯವರು ಅಡ್ಡದಾರಿಯಲಿ
ಹೆಂಗೆಂಗೋ ದುಡಿಯುವರು ದುರುಳರು.
-ಡಾ.ಯು.ಶ್ರೀನಿವಾಸ ಮೂರ್ತಿ,
ಉಪನ್ಯಾಸಕರು, ಬಳ್ಳಾರಿ
*****