ಅನುದಿನ ಕವನ-೧೦೬ ಕವಿ:.ಎ.ಎನ್ ರಮೇಶ್ ಗುಬ್ಬಿ, ಕವನದ ಶೀರ್ಷಿಕೆ:ದುರಂತ

ಕಾಲೆಳೆಯಲು ಕಾಲಹರಣ ಮಾಡುವವರ ಮೇಲೊಂದು ಹನಿಗವಿತೆ. ಬೇರೆಯವರನ್ನು ಬೀಳಿಸಲು ತಮ್ಮ ಇಡೀ ಬದುಕನ್ನು ಬರ್ಬಾತು ಮಾಡಿಕೊಳ್ಳುವವರ ದುರಂತ ಕಥೆ. ಇಂತಹವರು ಬುವಿಯ ವಿಕೃತಿಯೂ ಹೌದು. ಸೃಷ್ಟಿಯ ದುರಂತವೂ ಹೌದು. ಏನಂತೀರಾ.?”.            -ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇

ದುರಂತ..!
ಕಾಲೆಳೆಯಲು ಕುಳಿತವರನ್ನು
ಕೈಹಿಡಿದು ಮೇಲೆತ್ತಿಬಿಡಿ..
ಕಾಲಬಳಿ ಕಾಲಕಳೆಯುತ್ತ,
ಕಾಲೆಳೆಯಲು ಕಾಯುತ್ತ,
ಕಲ್ಲಿನಂತೆ ಕುಳಿತಿದ್ದರೆ……..

ಕ್ಷಿತಿಜದ ಕಂಗಳೊಳಗೆ
ಕ್ಷುಲ್ಲಕವಾಗಿ ಬಿಡುತ್ತಾರೆ.!
ಕಾಲಚಕ್ರದ ತಿರುಗಣೆಯಲ್ಲಿ
ಕಿಮ್ಮತ್ತಿಲ್ಲದೆ ಕಾಲಕಸವಾಗಿ
ಕಣ್ಮರೆಯಾಗಿ ಹೋಗುತ್ತಾರೆ.!

-ಎ.ಎನ್.ರಮೇಶ್. ಗುಬ್ಬಿ.
*****