ಬಳ್ಳಾರಿ:ಯುವ ಕಲಾವಿದ ಚನ್ನತೀರದ ಅವರು ಯಾವುದೇ ಕಲಾ ಶಿಕ್ಷಣ, ತರಬೇತಿ ಹಾಗೂ ಗುರುಗಳ ಮಾರ್ಗದರ್ಶನ ಪಡೆಯದೆ ಚಿತ್ರಕಲಾ ಕ್ಷೇತ್ರದಲ್ಲಿ ಹೆಸರು ಮಾಡುತ್ತಿರುವುದು ವಿಶೇಷ ಎಂದು ಪ್ರೌಢಶಾಲಾ ಚಿತ್ರಕಲಾ ಶಿಕ್ಷಕ ನಾಗೇಶ್ ರಾವ್ ಅವರು ಹೇಳಿದರು
ನಗರದ ನ್ಯೂ ಟ್ರೇಂಡ್ಸ್ ಆಟ್೯ ಗ್ಯಾಲರಿಯಲ್ಲಿ ಇತ್ತೇಚೆಗೆ ಹಮ್ಮಿಕೊಂಡಿದ್ದ ವಿಶ್ವ ಕಲಾ ದಿನಾಚರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಆಸಕ್ತಿ,ಶ್ರದ್ಧೆ, ಪರಿಶ್ರಮವಿದ್ದರೆ ಚಿತ್ರಕಲಾ ಕ್ಷೇತ್ರದಲ್ಲೂ ಹೆಸರು ಮಾಡಬಹುದು ಎನ್ನುವುದಕ್ಕೆ ಚನ್ನತೀರದ ಅವರೇ ಉದಾಹರಣೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾಯ೯ಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಂಗೀತ ಹಾಗೂ ಚಿತ್ರಕಲಾ ಶಿಕ್ಷಕ ಹವಾಲ್ದಾರ್ ಅವರು ಮಾತನಾಡಿ ಚಿತ್ರಕಲೆ ಹಾಗೂ ಚಿತ್ರಕಲಾವಿದರಿಗೆ ಸರಕಾರ ಮತ್ತಷ್ಟು ಉತ್ತೇಜನ ನೀಡುವ ಅಗತ್ಯವಿದೆ ಎಂದು ತಿಳಿಸಿದರು.
ಚನ್ನತೀರ ಅವರ ಆರ್ಟ್ ಗ್ಯಾಲರಿಯಲ್ಲಿ ಕಲಾಕೃತಿಗಳು ಕೈಬೀಸಿ ಕರೆಯುತ್ತಿವೆ ಎಂದರು.
ಚಿತ್ರಕಲಾ ಶಿಕ್ಷಕ ನರಸಿಂಹ ಮೂರ್ತಿ ಅವರು ಮಾತನಾಡಿ ಸದ್ದಿಲ್ಲದೆ ನಗರದಲ್ಲಿ ಆರ್ಟ್ ಗ್ಯಾಲರಿ ಆರಂಭಿಸುವ ಮೂಲಕ ಚನ್ನ ತೀರದ ಅವರು ಸಾಹಸ ಮಾಡಿದ್ದಾರೆ. ಕಲಾ ಪೋಷಕರಿಂದ ಪ್ರೋತ್ಸಾಹ ದೊರೆಯಬೇಕಿದೆ ಎಂದರು.
ಮೊಟ್ಟಮೊದಲ ಬಾರಿಗೆ
ನಗರದಲ್ಲಿ ಕಲಾ ಗ್ಯಾಲರಿ ಇರುವುದು ಬಳ್ಳಾರಿಗರಿಗೆ ಹೆಮ್ಮೆಯ ವಿಷಯ. ಇನ್ನಷ್ಟು ಕಲಾ ಗ್ಯಾಲರಿಗಳು ನಗರದಲ್ಲಿ ಆರಂಭವಾಗಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಮತ್ತೋರ್ವ ಚಿತ್ರಕಲಾ ಶಿಕ್ಷಕ ಮಲ್ಲಿಕಾರ್ಜುನ ಅಪಗುಂಡಿ ಅವರು ಮಾತನಾಡಿದರು.
ಕಾರ್ಯಕ್ರಮದಲ್ಲಿ ನಗರದ
ಕಿರಿಯ ಹಿರಿಯ ಚಿತ್ರಕಲಾವಿದರು. ವಿವಿಧ ಶಾಲೆಗಳ ಚಿತ್ರಕಲಾ ಶಿಕ್ಷಕರು, ಸಂಗೀತಗಾರರು,ನೃತ್ಯ ಶಿಕ್ಷಕರು, ಉದಯೋನ್ಮುಖ ಚಿತ್ರಕಲಾವಿದರು, ವಿವಿಧ , ಸ೦ಘ ಸ0ಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.
*****