ಬಳ್ಳಾರಿಯಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆ: ಶ್ರೀಮಂಜುನಾಥ ಲಲಿತಾ ಕಲಾ ಬಳಗದಿಂದ ಚಿತ್ರಕಲಾ ಪ್ರದರ್ಶನ

ಬಳ್ಳಾರಿ: ಶ್ರೀಮಂಜುನಾಥ ಲಲಿತಾ ಕಲಾ ಬಳಗ ಇತ್ತೇಚೆಗೆ ನಗರದಲ್ಲಿ ವಿಶ್ವ ಚಿತ್ರಕಲಾ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಿತು.
ವಿಶ್ವ ಚಿತ್ರಕಲಾ ದಿನಾಚರಣೆ ಅಂಗವಾಗಿ ಬಳಗದ ಅಧ್ಯಕ್ಷ ಚಿತ್ರಕಲಾವಿದ ಮಂಜುನಾಥ್ ಗೋವಿಂದವಾಡ ಅವರ ಚಿತ್ರಕಲಾ ಪ್ರದರ್ಶನವನ್ನು ಪದ್ಮ ಶ್ರೀ ಪ್ರಶಸ್ತಿ ಪುರಸ್ಕೃತರೂ ಆದ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ ಬಿ. ಮಾತಾ ಮಂಜಮ್ಮ ಜೋಗತಿ ಅವರು ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣನವರ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಚೋರನೂರು ಕೊಟ್ರಪ್ಪ, ಡಾ. ಅಶ್ವ ರಾಮು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತೆ ಮಾತಾ ಮಂಜಮ್ಮ ಜೋಗತಿ ಮತ್ತು ಕನ್ನಡ ವಿವಿಯಿಂದ ಡಾಕ್ಟರೇಟ್ ಪದವಿಗೆ ಭಾಜನರಾದ ಡಾ . ಅಶ್ವರಾಮು ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಿಲಾನಿ ಭಾಷಾ, ನೃತ್ಯಗುರು ಅಭಿಷೇಕ್ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಗಾಯಕ ದೊಡ್ದ ಬಸವಗವಾಯಿ ಕಗ್ಗಲ್ಲು ಅವರಿಂದ ಸಂಗೀತ ಕಾರ್ಯಕ್ರಮ ಜರುಗಿತು.
*****

13:53