ಅನುದಿನ ಕವನ-೧೧೪, ಕವಯತ್ರಿ-ಶೋಭ ಮಲ್ಕಿ ಒಡೆಯರ್, ಹೂವಿನ ಹಡಗಲಿ, ಕವನದ ಶೀರ್ಷಿಕೆ:ಮತ್ತೆ ಬಂತೇ ……!?

ಮತ್ತೆ ಬಂತೇ ……!?
———————————

ಮತ್ತೆ ಬಂತೇ ಈ ಹಾಳು ಕೊರೋನಾ
ಜನಮನದಲ್ಲಿ ಭಯದ ವಾತಾವರಣ
ದಿನದಿಂದ ದಿನಕ್ಕೆ
ಹುಟ್ಟುತ್ತಿದೆ ಹಬ್ಬುತ್ತಿದೆ
ಅವಳಿ ತ್ರಿವಳಿ ಕೊರೋನಾ
ಎಗ್ಗಿಲ್ಲದೆ ಸಾಗುತ್ತಿದೆ
ಹಗಲು – ಇರುಳು
ಭೇದವಿಲ್ಲದ‌ ಯಾನ !

ಬದುಕನ್ನೇ ಬಯಲಿಗಿಟ್ಟು
ನುಚ್ಚು ನೂರು ಮಾಡಿದರೂ
ಕೊರೋನಾ ಹಾವಳಿಗೆ ಮಿತಿಯಿಲ್ಲ
ಹಳೆಯ ಕೊರೋನಾ ಜನರಲ್ಲಿ
ಇನ್ನೂ ಮಾಸಿಲ್ಲ ಮುಗಿದಿಲ್ಲ !

ಹೊಸ ಬದುಕು
ಕಟ್ಟಿಕೊಳ್ಳಲು
ಹೆಜ್ಜೆ ಇಡುತ್ತಿರುವಾಗ
ಸದ್ದಿಲ್ಲದೇ ಸುದ್ದಿಯಿಲ್ಲದೆ
ನುಗ್ಗುತ್ತಿದೆ
ಮಿತಿಯಿಲ್ಲದ ಹುಚ್ಚು ವೇಗ !

ಸಂಬಂಧಿಗಳಿಗೆ ಬೆಲೆ ಕೊಡಬೇಕಾ ?
ಕೊರೋನಾಕ್ಕೆ ಭಯ ಪಡಬೇಕಾ ?
ತಿಳಿಯದಾಗಿದೆ
ಮನುಜನ ಸ್ಥಿತಿ
ಮಕ್ಕಳ ಮದುವೆಯನ್ನೂ
ಹೆತ್ತವರು ಸಂಭ್ರಮಿಸದಂತಹ
ದುಃಸ್ಥಿತಿ !

ಹೇ ದೇವಾ……
ಇನ್ನಾದರೂ ನಿನ್ನ ಭಕ್ತರ
ಕೈಬಿಡದೇ ಕಾಪಾಡು, ರಕ್ಷಿಸು
ರಕ್ಕಸನ ಕದಂಬ ಬಾಹುಗಳಿಂದ
ಭವಿಷ್ಯದಲ್ಲಿ ಬದುಕಲು
ಪ್ರಾಣ ಉಳಿಸು !

-ಶೋಭಾ ಮಲ್ಕಿ ಒಡೆಯರ್ 🖋
ಹೂವಿನ ಹಡಗಲಿ