ಮೂಕ ಪ್ರೇಕ್ಷಕರು..!!
ಆಸ್ಪತ್ರೆಯ ಗೋಡೆಗಳು ಕೇಳಿಸಿಕೊಂಡಷ್ಟು ಪ್ರಾರ್ಥನೆಗಳನ್ನು, ದೇವಸ್ಥಾನದ ಗೋಡೆಗಳೂ ಕೇಳಿಸಿಕೊಂಡಿರಲು ಸಾಧ್ಯವಿಲ್ಲ…
ಆಸ್ಪತ್ರೆಯ ಗೋಡೆಗಳು ಕಂಡಷ್ಟು ಚೀತ್ಕಾರವನ್ನು, ನರಕದ ಗೋಡೆಗಳೂ ಕಂಡಿರಲು ಸಾಧ್ಯವಿಲ್ಲ…
ನೋವನ್ನು, ನರಳಿಕೆಯನ್ನು, ನಿಟ್ಟಿಸಿರನ್ನು, ಅಸಹಾಯಕತೆಯನ್ನು, ಸಾವನ್ನು, ಖುಷಿಯನ್ನು ಎಲ್ಲವನ್ನೂ ನಿರ್ಲಿಪ್ತತೆಯಿಂದಲೇ ನಿಂತು ನೋಡುವ ಆಸ್ಪತ್ರೆಯ ಗೋಡೆಗಳು ಎಲ್ಲದಕ್ಕೂ ಮೂಕ ಸಾಕ್ಷಿಗಳು…
ಎಲ್ಲಾ ಗೆದ್ದೆ ಎಂದು ಬೀಗುವವನು ಇಲ್ಲಿ ಸೋಲುವನು
ಕೋಟಿಯಿದ್ದರೂ ಖರೀದಿಸಲಾರ ಆಯಸ್ಸು
ರೂಪಾಯಿಲ್ಲದೇ ಕೈಚೆಲ್ಲುತ್ತಾರಿಲ್ಲಿ ಭವಿಷ್ಯತ್ತು
ಎಲ್ಲದಕ್ಕೂ ಮೂಕ ಪ್ರೇಕ್ಷಕರು ಆಸ್ಪತ್ರೆಯ ಗೋಡೆಗಳು…
~ ವಿನುತಾ ❤️
*****