ಬಳ್ಳಾರಿ: ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ರೈತ ಸಮುದಾಯಕ್ಕೆ ಅನುಕೂಲವಾಗಲು ಅಗ್ರಿ ವಾರ್ ರೂಂ ಆರಂಭಿಸಲಾಗಿದೆ ಎಂದು ಹಿರಿಯ ವಿಜ್ಞಾನಿ, ಕೇಂದ್ರದ ಮುಖ್ಯಸ್ಥ ಡಾ. ರಮೇಶ್. ಬಿ.ಕೆ ಅವರು ತಿಳಿಸಿದರು.
ಈ ಕುರಿತಂತೆ ಕರ್ನಾಟಕ ಕಹಳೆ ಡಾಟ್ ಕಾಮ್ ಜತೆ ಅವರು ಮಾತನಾಡಿದರು.
ಕರೋನಾ ಎರಡನೇ ಅಲೆ ನಿಯಂತ್ರಿಸಲು ಸರಕಾರ ರಾಜ್ಯಾದಂತ್ಯ ಲಾಕ್‍ಡೌನ್ ಘೋಷಿಸಿ ಜನತಾ ಕಫ್ರ್ಯೂ ವಿಧಿಸಿದೆ. ರೈತರೂ ಕೂಡ ಕೋವಿಡ್ ನಿಯಂತ್ರಣ ನಿಯಮಗಳನ್ನು ಅನುಸರಿಸಿ ತಮ್ಮ ಆರೋಗ್ಯ ರಕ್ಷಣೆಯ ಕಡೆಗೆ ಗಮನ ಹರಿಸಬೇಕಾದ ತುರ್ತು ಸಂದರ್ಭ ಏರ್ಪಟ್ಟಿದೆ. ಈ ಸಂದಿಗ್ಧ ಸ್ಥಿತಿಯಲ್ಲಿ ರೈತರಿಗೆ ಕೃಷಿಯ ಮಾಹಿತಿಯ ಕೊರತೆಯನ್ನು ನೀಗಿಸಲು ಅಗ್ರಿ ವಾರ್ ರೂಂ ಆರಂಭಿಸಲಾಗಿದ್ದು, ಟೋಲ್ ಫ್ರೀ ಸಂಖ್ಯೆ 18004250470 ಗೆ ಕರೆ ಮಾಡಿ ಕೃಷಿ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು.
ಜತೆಗೆ ಕೃಷಿ ಮತ್ತು ಕೃಷಿ ಸಂಬಂಧಿತ ಕಸುಬುಗಳಾದ ಹೈನುಗಾರಿಕೆ, ಕುರಿಸಾಕಾಣಿಕೆ, ಕೊಯ್ಲೋತ್ತರ ಸಂಸ್ಕರಣೆ, ಅಣಬೆ ಬೇಸಾಯ ಇತ್ಯಾದಿ ವಿಷಯಗಳ ಬಗ್ಗೆ ವೈಜ್ಞಾನಿಕ ಮಾಹಿತಿ ಪಡೆಯಲು ಕೇಂದ್ರದ ವಿಜ್ಞಾನಿಗಳನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಡಾ. ರಮೇಶ್. ಬಿ.ಕೆ. ಇವರು ರೈತ ಬಾಂಧವರಲ್ಲಿ ಮನವಿ ಮಾಡಿದ್ದಾರೆ.
ಬಳ್ಳಾರಿ ಜಿಲ್ಲೆಯ ರೈತರು ಸಂಪರ್ಕಿಸಬೇಕಾದ ಕೃಷಿ ವಿಜ್ಞಾನ ಕೇಂದ್ರದ ವಿವಿಧ ವಿಷಯ ತಜ್ಞರು ಮತ್ತು ಅವರುಗಳ ದೂರವಾಣಿ ಸಂಖ್ಯೆಗಳು.
ಡಾ. ರಮೇಶ್, ಬಿ.ಕೆ(ಪಶು ವಿಜ್ಞಾನ – 94806 96317), ಡಾ|| ಜಯಪ್ರಕಾಶ್ ನಾರಾಯಣ ಆರ್.ಪಿ. (ತೋಟಗಾರಿಕೆ – 80735 37388), ಡಾ|| ಗೋವಿಂದಪ್ಪ, ಎಮ್.ಆರ್. (ಸಸ್ಯ ರೋಗ ಶಾಸ್ತ್ರ – 97424 46509), ಡಾ|| ರವಿ, ಎಸ್. (ಮಣ್ಣು ವಿಜ್ಞಾನ – 94489 96717), ಡಾ|| ಆನಂದಕುಮಾರ್, ವಿ (ಕೀಟ ಶಾಸ್ತ್ರ – 96206 88996), ಡಾ|| ಶಿಲ್ಪಾ, ಹೆಚ್. (ಗೃಹ ವಿಜ್ಞಾನ – 83100 79671) ಮತ್ತು ಜಗದೀಶ್ ನಾಯ್ಕ (ಹವಾಮಾನ ತಜ್ಞ – 77603 37407).
ಡಾ. ರಮೇಶ್ ಬಿ.ಕೆ