ಅನುದಿನ ಕವನ-೧೩೨, ಕವಿ: ಸಿದ್ಧಲಿಂಗಪ್ಪ ಬೀಳಗಿ, ಹುನಗುಂದ, ಬೀಳಗಿ ಅವರ ಹಾಯ್ಕುಗಳು

ಹಾಯ್ಕುಗಳು



ನಿರಾಕರಣೆಯ ತೀರ್ಪಿನಿಂದ
ಹತಾಶನಾಗಿಲ್ಲ ಗೆಳತಿ
ಸಾಕ್ಷಿಯೊಂದಿಗೆ ಮೇಲ್ಮನವಿ ಸಲ್ಲಿಸುವೆ


ಬೀಗಬೇಡ ಹುಡುಗಿ
ಬಹುತೇಕರ ಕಣ್ಣು
ನನ್ನ ಮೇಲಿದೆ.

ಬಳಸಿ ಬಿಸಾಕಿದ ಪ್ರೀತಿಯನು
ಕಸದ ತೊಟ್ಟಿಯೂ
ನಿರಾಕರಿಸಿತು.

ನಿನ್ನ ವಿರಹದುರಿಗೆ
ಕಲ್ಲೆದೆಯೂ
ಕರಗಿ ನೀರಾಗುತ್ತದೆ.

ತುಟಿಗೆ ತುಟಿ ಹಚ್ಚಿ
ಬೆಲ್ಲ ಕೊಡುವಾಗ
ಇರುವೆ ಕಣ್ಮುಚ್ಚಿಕೊಂಡವು.

ನಿನ್ನ ಹಾವಭಾವ
ಎಲ್ಲ ಭಾಷಿಕರಿಗೂ
ಅರ್ಥವಾಗುತ್ತವೆ.

ನೀ ಕಣ್ಮುಂದೆ
ಹಾದು ಹೋದಾಗಲೊಮ್ಮೆ
ಹೃದಯಕಂಪನ.

ಅದುಮಿಟ್ಟ
ಎದೆಯ ಲಾವಾರಸ
ತುಟಿ ಮೂಲಕ ಸ್ಪೋಟ.

ಮನಸಾರೆ ನಕ್ಕುಬಿಡು
ಅರಳಿದ ಹೂಗಳಲಿ
ಚಲುವು ತುಂಬಲಿ.
೧೦
ಮೌನದಲೆ ಕೊಲುವ
ನಿನಗೆ
ಮಾತು ಕಲಿಸಬೇಕಿದೆ.

– ಸಿದ್ಧಲಿಂಗಪ್ಪ ಬೀಳಗಿ
ಹುನಗುಂದ