ನಾನು ಆಡಲೆಂದೇ ಮನೆಯಿಂದ ಹೊರಬಂದೆ
–
ನಾನು ಆಡಲೆಂದೇ ಮನೆಯಿಂದ ಹೊರಬಂದೆ ಮತ್ತು ಅದರಲ್ಲೇ ಮುಳುಗಿದೆ
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ
–
ಯಾರು ನನಗೆ ಹೆಸರು ಮತ್ತು ಗೌರವವನ್ನು ನೀಡಿದರೋ
ಅಂಥ ಪ್ರತಿಷ್ಠಿತ ಮನೆಯಿಂದ ಬಂದಿದ್ದೇನೆ
ಎಷ್ಟೋ ಜನ ಪ್ರೇಮಿಗಳು ನನ್ನ ಸೂತ್ರದ ಗೊಂಬೆಯಾದರು
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ
–
ಎಲ್ಲಿಯವರೆಗೆ ನಾನು ಮನೆಯಲ್ಲಿದ್ದೆನೋ ಅಲ್ಲಿಯವರೆಗೆ ಜಗತ್ತಿನ ನೋಟದಿಂದ ದೂರವಿದ್ದೆ
ಒಂದೇ ಒಂದು ಸಲ ನಾನು ಹೊರಗೆ ಬಂದೆ, ನನ್ನ ಹೆಸರು ಎಲ್ಲರ ನಾಲಗೆಯ ಮೇಲಿತ್ತು
ಸಾಧುಗಳು ನನ್ನ ನೋಡುವ ಬಯಕೆಯಿಂದ
ತಮ್ಮ ಸ್ವರೂಪವನ್ನೇ ಕಾಡಿನಲ್ಲಿ ಬಿಟ್ಟು ಬಂದರು
–
ಎಲ್ಲಿಯವರೆಗೆ ನನ್ನ ಅಂಗಡಿ ವಸ್ತುಗಳಿಂದ ತುಂಬಿತ್ತೋ
ಅಲ್ಲಿಯವರೆಗೆ ಇಡೀ ಜಗತ್ತು ಅದನ್ನು ನೋಡಲೆಂದೇ ವ್ಯಾಕುಲಗೊಂಡಿತ್ತು
ಯಾವಾಗ ಅಡವಿಟ್ಟ ನನ್ನ ಅಮೂಲ್ಯವಾದ ಪರಿಶುದ್ಧತೆ ಎಲ್ಲರೆದುರು ಬಂದಿತೋ
ಆಗ ಅವರ ಭಾವ ಬಿದ್ದುಹೋಯಿತು
ಹಗಲು ಪಶ್ಚಿಮದಲ್ಲಿ ಮುಳುಗುವವರೆಗೆ
–
ಹಬ್ಬಾ ಖಾತೂನ್
ಕನ್ನಡಕ್ಕೆ : ಸಿದ್ಧರಾಮ ಕೂಡ್ಲಿಗಿ
*****
ಸಿದ್ಧರಾಮ ಕೂಡ್ಲಿಗಿ