ಇದು ತುಂಬಾ ವಿಭಿನ್ನ ಕವಿತೆಯಿದು. ಅರ್ಥೈಸಿದಷ್ಟೂ ಒಳಗಿದೆ ಸಾವಿರ ಕಥೆಯಿದೆ. ಎಂದಿಗೂ ತೀರದ ಜಗದ ಶೋಷಿತರ ವ್ಯಥೆಯಿದೆ. ಫಲಾನುಭಾವಿಗಳು-ಅಧಿಕಾರಸ್ಥರು, ಬಡವರು-ಬಲ್ಲಿದರು, ಹೀಗೆ ನೂರು ಕರಾಳ ಸತ್ಯಗಳ ಮಾರ್ಮಿಕ ಮಾರ್ದನಿಯಿದೆ. ನೊಂದವರ ಕಂಬನಿಯಿದೆ. ಕವಿತೆ ಬರೆದು, ಅಂತರ್ಜಾಲದಲ್ಲಿ ಚಿತ್ರ ಹುಡುಕುವಾಗ ಕಂಡ ಈ ಚಿತ್ರ ಕವಿತೆಯ ಭಾವಾರ್ಥಕ್ಕೆ ತುಂಬಾ ಸೂಕ್ತವೆನಿಸಿತು. ಸರಿಯಿದೆಯಲ್ವಾ.?”
– ಪ್ರೀತಿಯಿಂದ ಎ.ಎನ್.ರಮೇಶ್. ಗುಬ್ಬಿ.👇
ನಾವು-ನೀವು.!
ನಮ್ಮಯ ಜೋಳಿಗೆಗೇ
ತೂತು ಬಿದ್ದಿದೆ.!
ಹರಿದ ಜೋಳಿಗೆಗೆ
ನೀವೆಷ್ಟು ಸುರಿದರೇನು.?
ತಳಕಿತ್ತುಹೋದ ನಮ್ಮ
ಜೋಳಿಗೆ ಕೆಳಗೇ..
ನಿಮ್ಮಯ ತಿಜೋರಿ
ತೂಗು ಬಿದ್ದಿದೆ.!
ಕೊಟ್ಟಂತೆ ಮಾಡಿ
ಧನಿಕರಾಗುತ್ತೀರಿ ನೀವು
ಪಡೆದಂತೆ ಕಂಡರೂ
ದರಿದ್ರರಾಗುತ್ತಿದ್ದೇವೆ ನಾವು.!
ಕೊಟ್ಟು ಕೊಡದಂತಿರುವ
ಪಡೆದು ಸಿಗದಂತಿರುವ
ಈ ನಿತ್ಯ ಚದುರಂಗದಾಟದಿ
ನೀವು ಗೆಲ್ಲುತ್ತಲೇ ಇದ್ದೀರ.!
ನಾವು ಸಾಯುತ್ತಲೇ ಇದ್ದೀವಿ.!
-ಎ.ಎನ್.ರಮೇಶ್. ಗುಬ್ಬಿ.
*****