ನಲ್ಲನಿಗೆ
*************
ಮುಡಿಗೆ ಮಲ್ಲಿಗೆ
ಬೇಕೆಂದು
ನಾss ಬಯಸುವುದಿಲ್ಲ
ನಾss ಬಯಸುವುದು
ನಿನ್ನ ಮುಗುಳ್ನಗೆ !
ಮಹಲು – ಮಂದಿರ
ನಾss ಬಯಸುವುದಿಲ್ಲ
ನಾss ಬಯಸುವುದು
ನಿನ್ನ ಪ್ರೀತಿಯ ಹಂದರ !
ಮೊಗದಲ್ಲಿ ನಗೆಯ ಚಂದಿರ !
ಮುತ್ತು – ರತ್ನ ಹಣಕಾಸು
ನಾss ಬಯಸುವುದಿಲ್ಲ
ನಾss ಬಯಸುವುದು
ಸಿಟ್ಟು – ಸೆಡುವು ರಹಿತ
ನಲ್ಮೆಯ ಒಮ್ಮನಸು !
ವಿರಹದುರಿಯ ಸ್ವಪ್ನದಲ್ಲೂ
ನಾss ಬಯಸುವುದಿಲ್ಲ
ನಾss ಬಯಸುವುದು
ನಿನ್ನ ಸಾಮೀಪ್ಯ
ಒಲವಿನ ಹೊಂಗನಸು !
-ಪ್ರಕಾಶ್ ಮಲ್ಕಿ ಒಡೆಯರ್
ಹೂವಿನ ಹಡಗಲಿ
ಗಝಲ್
“”””””””””
ಗುರಿ ಎಲ್ಲೇ ಇರಲಿ
ಭರವಸೆಯು ಪ್ರತಿ ಹೆಜ್ಜೆಯಲ್ಲೂ ಇರಲಿ !
ದಾರಿ ಹೇಗೆ ಇರಲಿ
ಊರು ಸೇರುವ ತವಕವಿರಲಿ !
ಮನಸ್ಸು ನಿಲುಕದಂತೆ ಹಾರಾಡುತ್ತಿರಲಿ
ಹತೋಟಿಗೆ ತರುವ ತಾಕತ್ತಿರಲಿ !
ಗುಣವು ದ್ವೇಷಕ್ಕೆ ತಿರುಗದಿರಲಿ
ಸಹನೆಯೂ ಅಲ್ಲಿ ಮೀಸಲಿರಲಿ !
ಚೆಲುವು ಎಷ್ಟೇ ಇರಲಿ
ಚಂಚಲತೆಗೆ ಕಡಿವಾಣವಿರಲಿ !
ನುಡಿಯುವ ನಾಲಿಗೆಗೆ ಗಮನವಿರಲಿ
ನಡತೆಯೂ ಶುದ್ಧವಾಗಿರಲಿ !
ಸಿಡುಕು – ದುಡುಕು ಇದ್ದರೂ ಇರಲಿ
ಹೃದಯ ಎಂದೂ ಮೃದುವಾಗಿರಲಿ !
ಸಂಬಂಧಗಳು ಎಷ್ಟೇ ಚೂರು – ಚೂರಾಗಿರಲಿ
ಮತ್ತೆ ಜೋಡಿಸುವ ಸಂಯಮವಿರಲಿ !
ಬದುಕಿನೊಳಗಣ ಜಂಜಾಟವಿರಲಿ
ದಾಂಪತ್ಯದ ಕೊಂಡಿ ಕಳಚದಿರಲಿ !
ಸರಸದೊಳಗೆ ವಿರಸವಿರಲಿ
ಸಂಸಾರದ ಸ್ವರ ಎಂದಿಗೂ ತಾಳ ತಪ್ಪದಿರಲಿ !
-ಶೋಭಾ ಮಲ್ಕಿ ಒಡೆಯರ್🖋
ಹೂವಿನ ಹಡಗಲಿ
*****