ಹಂಪಾಪಟ್ಟಣದಲ್ಲಿ ಶ್ರೀ ವಾಸವಿ ಜಯಂತಿ: ಬಡವರಿಗೆ 40ಸಾವಿರ ರೂ. ಮೌಲ್ಯದ ಆಹಾರ ಕಿಟ್ ವಿತರಿಸಿ ಔದಾರ್ಯ ಮೆರೆದ ಆರ್ಯ ವೈಶ್ಯ ಸಂಘ

ಹಗರಿಬೊಮ್ಮನಹಳ್ಳಿ: ಕೊರೋನಾ ಸಂಕಷ್ಟದ ಈ ಸಮಯದಲ್ಲಿ ಬಡವರು, ಅಂಗವಿಕಲರು ಹಾಗೂ ಆಶಾ ಕಾರ್ಯಕರ್ತೆಯರ ನೆರವಿಗೆ ಧಾವಿಸಿವ ಮೂಲಕ ಆರ್ಯ ವೈಶ್ಯ ಸಂಘದ ಪದಾಧಿಕಾರಿಗಳು ಇತರರಿಗೆ ಮಾದರಿಯಾಗಿದ್ದಾರೆ.
ಹೌದು! ತಾಲೂಕಿನ ಹಂಪಾಪಟ್ಟಣ ಗ್ರಾಮದ ಆರ್ಯವೈಶ್ಯ ಸಂಘವು, ಶುಕ್ರವಾರ ಜರುಗಿದ ಶ್ರೀ ವಾಸವಿ ಜಯಂತಿ ಪ್ರಯುಕ್ತ ಗ್ರಾಮದ 25 ಜನ ಕಡುಬಡವರು,ಅಂಗವಿಕಲರು ಹಾಗೂ ಹಗಲಿರುಳೆನ್ನದೆ ಸದಾಕಾಲ ನಿರಂತರ ಜನಸೇವೆಯಲ್ಲಿರುವ ಆಶಾ ಕಾರ್ಯಕರ್ತೆಯರಿಗೆ ಒಟ್ಟು ನಲವತ್ತು ಸಾವಿರ ರೂ. ಮೌಲ್ಯದ ಆಹಾರದ ಕಿಟ್ ವಿತರಿಸಿ ಔದಾರ್ಯ ಮೆರೆದಿದೆ.
ಪ್ರತಿಯೊಬ್ಬರಿಗೂ ಹದಿನೈದು ನೂರು ರೂ.‌ಮೌಲ್ಯದ ಆಹಾರ ಕಿಟ್ ಗಳನ್ನು ನೀಡಿ ಶ್ರೀ ವಾಸವಿ ಜಯಂತಿಯನ್ನು ಅರ್ಥಪೂರ್ಣವಾಗಿ ನೆರವೇರಿಸಿದ್ದಾರೆ.
ಗ್ರಾಮದ ಶ್ರೀ ನಗರೇಶ್ವರ ದೇವಸ್ಥಾನದಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದ ಬಳಿಕ ಆಹಾರ ಕಿಟ್ ಗಳನ್ನು ವಿತರಿಸಿದರು.
ಕಿಟ್ ವಿತರಣೆ ಮಾಡುವ ಸಂದರ್ಭದಲ್ಲಿ ಸಮಾಜದ ಅಧ್ಯಕ್ಷರಾದ ಶ್ರೀನಾಥ್ ಕಾರ್ಯದರ್ಶಿ ಜಿ ಶ್ರೀನಿವಾಸ ಮುಖಂಡರಾದ ಜಿ ಸತ್ಯನಾರಾಯಣ ಪಿ ಗುರುರಾಜ ಬಿ ಈಶಣ್ಣ ಆರ್ ಜಿ ಬಸವರಾಜ್ ಆರ್ ವಿ ಬಸವರಾಜ್ ಹಾಗೂ ಮಹಿಳಾ ಸಮಾಜದ ಜಿ ಸವಿತಾ ಜಿ ಸರಸ್ವತಿ ಹಾಗೂ ಕಸ್ತೂರಮ್ಮ ನವರು ಹಾಗೂ ಗ್ರಾಮ ಪುರೋಹಿತರಾದ ಮಧುಸೂದನ್ ಜೋಶಿಯವರು ಪಾಲ್ಗೊಂಡಿದ್ದರು.
ದಾನಿಗಳು: ನಾಗರಾಜ್ ಬಳ್ಳಾರಿ, ರಾಘವೇಂದ್ರ ಕಡ್ಡಿರಾಂಪುರ, ಶ್ರೀನಾಥ್, ಗುರುರಾಜ್, ಸತ್ಯನಾರಾಯಣ ಜೋಶಿ ಹಂಪಾಪಟ್ಟಣ, ಕಾತ್ರಿಕಿ ಶ್ರೀನಿವಾಸ್ ಹಗರಿಬೊಮ್ಮನಹಳ್ಳಿ, ಪ್ರಗತಿ ಗ್ರಾಮೀಣ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕ ಬಸವರಾಜ್, ಕೆ ಮಂಜುನಾಥ್ ಗುಪ್ತ, ಬಾಬು ರಾಜೇಂದ್ರ ಪ್ರಸಾದ್, ಸಂಗಮನಾಥ ಕಲ್ಗುಡಿ, ಆರ್ ಬಸವರಾಜ್ ರಾಮಾಂಜನೇಯ ಮೆಡಿಕಲ್ ಮರಿಯಮ್ಮನಹಳ್ಳಿ, ಇವರಲ್ಲಿ‌ ಕೆಲವರು ಸಾವಿರ ಹದಿನೈದುನೂರು ಹಾಗೂ 2000 ರೂಪಾಯಿಗಳನ್ನು ನೀಡಿದ್ದಾರೆ. ಅಗತ್ಯವಿದ್ದ ಹತ್ತು ಸಾವಿರ ರೂಪಾಯಿಗಳನ್ನು ನಮ್ಮ ಗ್ರಾಮದ ಸಂಘದಿಂದ ಭರಿಸಿದ್ದೇವೆ ಎಂದು ಹಂಪಾಪಟ್ಟಣ ಗ್ರಾಮದ ಆರ್ಯ ವೈಶ್ಯ ಸಂಘದ ಕಾರ್ಯದರ್ಶಿ ಜಿ.‌ಶ್ರೀನಿವಾಸ್ ಅವರು ತಿಳಿಸಿದರು.
ಕರ್ನಾಟಕ ಕಹಳೆ ಡಾಟ್ ಕಾಮ್ ಗೆ ಜತೆ ಮಾತನಾಡಿದ ಅವರು ಈ ಬಾರಿ ವಾಸವಿ ಜಯಂತಿಯನ್ನು ವಿಶಿಷ್ಟವಾಗಿ ಆಚರಿಸಬೇಕೆಂದು ಯೋಚಿಸಿ, ಸಮಾಜದ ಹಿರಿಯರು, ಸಂಘದ ಪದಾಧಿಕಾರಿಗಳ ಗಮನಕ್ಕೆ ತಂದಾಗ 25 ಅರ್ಹ ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಲು ಒಪ್ಪಿದರು ಎಂದು ಹೇಳಿದರು.
******