ಅನುದಿನ ಕವನ:೧೪೬, ಕವಯತ್ರಿ:ರಂಹೊ(ರಂಗಮ್ಮ ಹೊದೇಕಲ್). ಕವನದ ಶೀರ್ಷಿಕೆ: ಬುದ್ಧ

ಬುದ್ಧ

ಬುದ್ಧ
ಚಿತ್ರಗಳಲಿಲ್ಲ
ನೋಟದಲ್ಲಿದ್ದಾನೆ!

ಬುದ್ಧ
ಗೋಡೆಯ ಮೇಲೆ ತೂಗುವುದಿಲ್ಲ
ಎದೆಯೊಳಗೆ ಜೀಕುತ್ತಾನೆ!

ಬುದ್ಧ
ಮಾತುಗಳ ಮೆರವಣಿಗೆಯಲ್ಲಿಲ್ಲ
ಮೌನದಲ್ಲಿದ್ದಾನೆ!

ಬುದ್ಧ
ಕಿತ್ತುಕೊಳ್ಳುವುದರಲ್ಲಿಲ್ಲ
ಕೊಟ್ಟು ಸುಖಿಸುವುದರಲ್ಲಿದ್ದಾನೆ!

ಬುದ್ಧನೆಂದರೆ ಮತ್ತೇನು
ತಾಯಿಯೂ….
ಮಗುವೂ……!!

-ರಂಹೊ, ತುಮಕೂರು
*****

 

ರಂಗಮ್ಮ ಹೊದೇಕಲ್(ರಂಹೊ)