ಬಳ್ಳಾರಿ ನಗರದ 1300 ಪೌರಕಾರ್ಮಿಕರಿಗೆ ಆಹಾರಧಾನ್ಯಗಳ ಕಿಟ್ ವಿತರಿಸಿದ ಕಾಪೋರೇಟರ್ ಎನ್. ಗೋವಿಂದರಾಜು

ಬಳ್ಳಾರಿ: ಕೋವಿಡ್ ಸಂಕಷ್ಟದ ಈ ಸಮಯದಲ್ಲಿ ಕೆಲವು ಉಳ್ಳವರು ಬಡಜನರ ನೋವಿಗೆ ಸ್ಪಂದಿಸುತ್ತಿದ್ದಾರೆ. ನಗರದ 11ನೇ ವಾರ್ಡಿನ ಕಾರ್ಪೋರೇಟರ್ ಎನ್. ಗೋವೀಂದರಾಜು ಅವರು ತಮ್ಮ ವಾರ್ಡಿನ ಎಲ್ಲಾ ಬಡವರು, ಆರ್ಥಿಕವಾಗಿ ಸಂಕಷ್ಟಕ್ಕೆ ಒಳಗಾಗಿರುವ ಮಧ್ಯಮ‌ವರ್ಗದವರಿಗೂ ಭಾನುವಾರ ಆಹಾರ‌ಕಿಟ್ ನೀಡಿದರು.
ಜತೆಗೆ ನಗರದ ಎಲ್ಲಾ 1300 ಜನ ಪೌರ ಕಾರ್ಮಿಕರಿಗೆ ಆಹಾರ ಕಿಟ್ ಗಳನ್ನು ಹಂಚುವ ಮೂಲಕ ಗಮನ ಸೆಳೆದಿದ್ದಾರೆ.
ತಮ್ಮ ತಂದೆ ಮಾಜಿ ಕಾರ್ಪೋರೇಟರ್ ಎನ್. ಕುಮಾರಸ್ವಾಮಿ ಅವರಂತೆ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಕಾರ್ಪೊರೇಟರ್ ಗೋವಿಂದರಾಜು ಅವರ ಕಾರ್ಯಕ್ಕೆ ನಗರದಾದ್ಯಂತ ಮೆಚ್ಚುಗೆ ವ್ಯಕ್ತವಾಗಿದೆ.
ನಗರದ ಅರ್ಚಕರು, ಅಡಿಗೆ ಕೆಲಸದವರು, ನಗರದ ಕೆಲವು ಪತ್ರಕರ್ತರಿಗೂ ಆಹಾರ ಕಿಟ್ ಗಳನ್ನು ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಕಾರ್ಪೊರೇಟರ್ ಎನ್. ಕುಮಾರಸ್ವಾಮಿ, ಲಕ್ಷ್ಮಣ ಶೆಟ್ಟಿ, ರಂಗ ಕಲಾವಿದ ನಾಗಭೂಷಣ, ಸಮಾಜ ಸೇವಕ ಶ್ರೀನಿವಾಸ್ ಮುಂತಾದವರಿದ್ದರು.
*****