ನಿಶ್ಯಬ್ಧ
ಈಗ ನಿಶ್ಯಬ್ದ
ಮಳೆ ಬಂದರೆ ಸಾಕು
ಎಲ್ಲೋ ಅಡಗಿದ್ದ ಕಪ್ಪೆಗಳ ಸಮೂಹ ಗಾಯನ
ಎತ್ತರದ ದನಿಯಲ್ಲಿ
ಅದು ಖುಷಿಗೋ
ಮಳೆಯರಾಯನಿಗೆ ಜಯಘೋಷವೋ
ಕೃತಜ್ಞತೆಯೋ
ಬಿಸಿಲ ಝಳದ
ನಮ್ಮ
ಭುವಿಯಲ್ಲಿ
ಎಲ್ಲಿ ಅಡಗಿಹವೋ
ಮೌನವಹಿಸಿ
ವಟಗುಟ್ಟುವ ಕಪ್ಪೆಗಳು
ಸಾವಿಂಗೆ ಹೆದರಿ
ದೇವಂಗೆ ನೆನೆದರೆ
ಸಾವು ಬಾರದೇ ಇದ್ದೀತೇ?
ಭುವಿಯ ತಾಕಿದಾಗಲೇ
ಬೆನ್ನಿಗೇರಿತು ಸಾವು
ಯಾರು ಹಿಂದೋ
ಯಾರು ಮುಂದೋ
-ಮಹಿಮ
(ಮಲ್ಲಿಕಾರ್ಜುನಸ್ವಾಮಿ ಹಿರೇಮಠ)
ಹಂದ್ಯಾಳ್(ಬಳ್ಳಾರಿ ತಾ. ಜಿ)
*****
ಮಹಿಮ
Beautiful appas