ಜನಮನ [ಅಭಿಪ್ರಾಯ: ಮಲ್ಲಿಕಾರ್ಜುನಸ್ವಾಮಿ ಹಿರೇಮಠ(ಮಹಿಮ), ನಿವೃತ್ತ ಡಿಡಿಪಿಐ ರಾಯಚೂರು]

ಶಿಕ್ಷಕರು ಅಯೋಗ್ಯರಲ್ಲ.ಖಂಡಿತವಾಗಿ ಅವರು ಶಿಕ್ಷಣ ತಜ್ಞರು.. ಯೋಜನೆ ಕಾರ್ಯಕ್ರಮಗಳನ್ನು ರೂಪಿಸುವಲ್ಲಿ ಅವರ ಕಡೆಗಣನೆ ಸಲ್ಲ..
ಅವರನ್ನು ಕಡೆಗಣಿಸಿ ಕಾರ್ಯಕ್ರಮಗಳನ್ನು ಏಕಪಕ್ಷೀಯವಾಗಿ ಎನ್ ಜಿ ಓ ಗಳ ಸಲಹೆಯಂತೆ ಅವರ ಯೊಜನೆಗಳಂತೆ ರೂಪಿಸಿದಲ್ಲಿ ಯಾವುದೇ ಕಾರ್ಯಕ್ರಮಗಳು ಸಫಲವಾಗುವುದಿಲ್ಲ..ಇದನ್ನು ಇಂದು ನಾವು ಮನಗಾಣಬೇಕಿದೆ.

ನಾವು (ಇಲಾಖೆ)ಸ್ವಂತಿಕೆಯನ್ನು ಕಳೆದುಕೊಂಡು ಪ್ರತಿಯೊಂದಕ್ಕೂ ಎನ್ ಜಿ ಓ ಗಳತ್ತ ನೋಡುತ್ತಾ ಹೊರಟಿರುವುದು ದುರಂತ..

ಎನ್ ಜಿ ಓ ಗಳು ಹೊರತರುವ ಯೋಜನೆಗಳನ್ನು ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಹಾಗೂ ಅನುಷ್ಠಾನಗೊಳಿಸುವುದಾದಲ್ಲಿ ಇಲಾಖೆಯ ಸಾವಿರಾರು ಅಧಿಕಾರಿಗಳ,ಲಕ್ಷಾಂತರ ಶಿಕ್ಷಕರ ಅನುಭವಕ್ಕೆ ಸಿಕ್ಕ ಬೆಲೆಯಾದರೂ ಏನು?

ಎನ್ ಜಿ ಓಗಳ ಯೋಜನೆಗಳನ್ನು ಅನುಷ್ಠಾನ ಗೊಳಿಸುವುದು ನಮ್ಮ ಅದ್ಯ ಕರ್ತವ್ಯವಾಗಿ ಹೋದಲ್ಲಿ ನಮ್ಮ ಸ್ವಂತಿಕೆಯನ್ನು ನಾವೇ ಅಪಮಾನಗೊಳಿಸಿಕೊಂಡಂತಾಗಿದೆ…

ಈ ಬಗ್ಗೆ ದಿಟ್ಟ ನಿಲುವು ಇಂದು ಅನಿವಾರ್ಯವಾಗಿ ತಾಳಬೇಕಿದೆ
.ಎನ್ ಜಿ ಓ ಗಳು ತಮ್ಮ ಕಾರ್ಯಕ್ರಮಗಳನ್ನು ನಮ್ಮ ಮೂಲಕ ಅನುಷ್ಠಾನಗೊಳಿಸಿಕೊಂಡು ಹೆಮ್ಮೆಯ ಗರಿಯನ್ನು ಧರಿಸುತ್ತವೆ..

ಅವರ ಎಲ್ಲಾ ಕಾರ್ಯಕ್ರಮ ಗಳು ಒಂದಲ್ಲ ಒಂದು ರೀತಿ ನಮ್ಮ ಕಾರ್ಯಕ್ರಮ ಗಳೇ ಹೊರತು ಬೇರೇನಲ್ಲ.ನಮ್ಮಿಂದಲೇ ವಿಷಯ ಹೆಕ್ಕಿಕೊಂಡು ಅದಕ್ಕೊಂದು ಹೊಸ ಬಣ್ಣ ಬಳಿದು ನಮಗೆ ನೀಡಿ ತಾವು ಹೆಸರು ಹಾಗೂ ಲಾಭ ಗಳಿಸುತ್ತಾರೆ.ಅದಲ್ಲದೇ ಅಪರೋಕ್ಷವಾಗಿ ಶಿಕ್ಷಕರ ಮೇಲೆ ಹಿಡಿತ ಸಾಧಿಸಿ ತಾವು ಅಪ್ರತಿಮ ಶಿಕ್ಷಣ ತಜ್ಞರೆಂಬಂತೆ ಫೊಜು ಬೇರೆ ಕೊಡುತ್ತಾರೆ..ಇವರಿಗೆ ಒಂದು ಮಾದರಿ‌ ಪಾಠ ನೀಡುವ ತಾಖತ್ತಿಲ್ಲ.ಇವರು ಮೂಲತಃ ಏನೂ ಅಲ್ಲ ಅನಿಸಿಬಿಡುತ್ತದೆ.NGO ಗಳು‌ ರೂಪಿಸಿದ ಕಾರ್ಯಕ್ರಮಗಳನ್ನು ನಾವೇಕೆ ಅಮಲುಗೊಳಿಸಬೇಕು.ನಮಗೆ ಅಷ್ಟು ಬುದ್ಧಿ ಹಾಗೂ ಯೋಜನೆ ರೂಪಿಸುವ ತಾಖತ್ತು ಇಲ್ಲವೇ ನಮಗೆ ಎಂದು ಕೆಲ ಶಿಕ್ಷಕರು ನನ್ನನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು ಉಂಟು.

ಎನ್ ಜೀ ಓ ಗಳ ಎಲ್ಲಾ ಯೋಜನೆಗಳಿಗೆ ಜೀ ಹುಜೂರ್ ಎನ್ನದೇ ಪ್ರತಿರೋಧ ಒಡ್ಡಬೇಕಾದ ಅನಿವಾರ್ಯತೆ ಇದೆ.ಅವರ ನಡವಳಿಕೆ,ವರ್ತನೆಗಳು ತುಂಬಾ ಅಸಹನೀಯ.ನಮ್ಮ ಮೇಲೆ ಮೆಣಸು ರುಬ್ಬುವ ಅವರ ಮನಸ್ಥಿತಿ ವಿಷಾದನೀಯ..ವಿಪರ್ಯಾಸ..ಏನೂ ಮಾತನಾಡುವಂತಿಲ್ಲ.ಖಮಕ್ ಕಿಮಕ್ ಅನ್ನುವಂತಿಲ್ಲ.ದಾಸರಿದ್ದಂತೆ ಇರಬೇಕು.

ಏನಾದರೂ ನಮ್ಮ ಅಭಿಪ್ರಾಯ ನೇರವಾಗಿ ‌ಹೇಳಿದರೆ ವಿಷಯ ಎಲ್ಲಿ ಮುಟ್ಟಬೇಕೋ ಅಲ್ಲಿ ಮುಟ್ಟಿ ಮೆಣಸು ರುಬ್ಬುವ ಪ್ರಕ್ರಿಯೆ ಶುರುವಾಗುತ್ತದೆ.ನಾವಿರಲಿ ನಮ್ಮ ಹಿರಿಯ
ಅಧಿಕಾರಿಗಳ ಮಾತಿಗೂ ಅಲ್ಲಿ ಯಾವುದೇ ಬೆಲೆ ಇಲ್ಲ.Do as I say ಸಂಸ್ಕೃತಿಗೆ ವಿದಾಯ ಹೇಳುವ ಶುಭದಿನಗಳು ನಮಗೆ ಬೇಗ ಬರಬೇಕು.

ನಮ್ಮನ್ನು ನಾವು ಆಳಿಕೊಳ್ಳುವ ದಿನಗಳು ಬರಲೇಬೇಕಿದೆ…ನಮ್ಮದೇ ಆದ ಕಾರ್ಯಕ್ರಮಗಳು ರೂಪುಗೊಳ್ಖುವುದು ಅನಿವಾರ್ಯ.. ಇದು ಆಗಲೇಬೇಕಿದೆ…

ಶಿಕ್ಷಕರಿಂದ ಶಿಕ್ಷಕರಿಗಾಗಿ ಮಕ್ಕಳಿಗೋಸ್ಕರ ಎನ್ನುವ ಘೋಷವಾಕ್ಯ ನಮ್ಮದಾಗಲೇಬೇಕಿದೆ.

(ಸತ್ಯವನ್ನು ಹೇಳಿದ್ದೇನೆ.ಅಪಾರ್ಥ ಸಲ್ಲದು. ದಾಸ್ಯಕ್ಕೆ ಮನಸ್ಸು ಒಪ್ಪದು..ತಲೆಬಾಗದು.ನಮ್ಮ ಶಾಲೆಗಳು ಉಳಿಯಬೇಕು.ಶಿಕ್ಷಕರಿಗೆ ಬೋಧನಾ ಸ್ವಾತಂತ್ರ್ಯ ದೊರೆಯಬೇಕು.ಅದು ಅವರ ಹಕ್ಕು.ಅವರು ಕಲಿಸದಿದ್ದರೆ ಬೇಷರತ್ತಾಗಿ ಕ್ರಮ ಜರುಗಿಸೊಣ..ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡೋಣ..ಬಲವಂತದ ಹೇರುವಿಕೆ ಆಗಬಾರದು..ಸಂತೋಷದಿಂದ ಹೋರುವಿಕೆ ಆಗಬೇಕು)

-ಮಹಿಮ, ನಿವೃತ್ತ ಡಿಡಿಪಿಐ, ರಾಯಚೂರು