ಹೃದಯವಂತ, ಸ್ನೇಹಜೀವಿ ಫೋಟೊಗ್ರಾಫರ್ ಹಂಪಿ ಬಣಗಾರ್ -ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್

ವಿಶ್ವ ಪಾರಂಪರಿಕ ತಾಣ ಹಂಪಿ ಮತ್ತು ಪರಿಸರದ ಆಕರ್ಷಕ, ವಿಶಿಷ್ಟ ಫೋಟೊಗಳನ್ನು ಕ್ಲಿಕ್ಕಿಸಿ ಸಾವಿರಾರು ಅಭಿಮಾನಿಗಳನ್ನು ಗಳಿಸಿಕೊಂಡಿರುವ, ಹಂಪಿ ಬಣಗಾರ ಎಂದೇ ಪ್ರಸಿದ್ಧರಾಗಿರುವ ಗ್ರಾಮೀಣ ಪ್ರತಿಭೆ ಶಿವಶಂಕರ ಬಣಗಾರ ಅವರ ಕುರಿತು ಸಾಹಿತಿ, ಪಶು ವೈದ್ಯಾಧಿಕಾರಿ ಡಾ.‌ಜೆ ಎಸ್ ಅಶ್ವತ್ಥ ಕುಮಾರ್ ಅವರ ಪ್ರೀತಿಯ ಬರಹ.👇

“ಹೃದಯವಂತ, ಸ್ನೇಹಜೀವಿ ಹಂಪಿ ಬಣಗಾರ್”
-ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್

ಹೊಸಪೇಟೆಯ ಶಿವಶಂಕರ ಬಣಗಾರ್ ಇವರು ನನ್ನ ಆತ್ಮೀಯ ಸ್ನೇಹಿತರು. ಪತ್ರಿಕೋದ್ಯಮದಲ್ಲಿ ಸಾಕಷ್ಟು ವರ್ಷಗಳ ಅನುಭವಿದೆ. ಕೆಲ ವರ್ಷಗಳ ಹಿಂದೆ ಫೋಟೋಗ್ರಫಿಯನ್ನು ಹವ್ಯಾಸವಾಗಿ ಆರಂಭಿಸಿದರು.
ಆಸಕ್ತಿ ಹೆಚ್ಚಿದಂತೆಲ್ಲಾ ಅವರು ತೆಗೆಯುವ ಚಿತ್ರಗಳ ಗುಣಮಟ್ಟವೂ ಹೆಚ್ಚುತ್ತಾ ಬಂದಿದೆ. ಪ್ರಸ್ತುತ ಬಣಗಾರ ಅವರು ಅಂತರಾಷ್ಟ್ರೀಯ ಖ್ಯಾತಿಯ ಛಾಯಾಗ್ರಾಹಕರು. ಬಹು ದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರತಿದಿನವೂ ಹಂಪೆಯಲ್ಲೊಂದು ಸುತ್ತು ಹಾಕಿ ನೂರಾರು ಛಾಯಾಚಿತ್ರಗಳನ್ನು ಕ್ಯಾಮೆರಾದಲ್ಲಿ ತುಂಬಿಸಿಕೊಂಡು ಬಂದರೆ ಸಮಾಧಾನ ಇವರಿಗೆ.
ನಿತ್ಯವೂ ಇವರ ಫೋಟೋಗ್ರಫಿಗೆ ಪೋಸ್ ಕೊಡಲು ಸೂರ್ಯದೇವನೂ ಹಂಪಿಯಲ್ಲಿ ಹೆಚ್ಚು ಸುಂದರವಾಗಿ ಕಾಣಿಸಿಕೊಳ್ಳುತ್ತಾನೆ.
ಬಣಗಾರರು ಕ್ಲಿಕ್ಕಿಸಿರುವ ಹಂಪಿ ಮತ್ತು ಪರಿಸರದ ಸಾವಿರ ಸಾವಿರ ಛಾಯಾಚಿತ್ರಗಳನ್ನು ಸಾಧಾರಣ ಅಳತೆಯಲ್ಲಿ ಪ್ರಿಂಟ್ ಹಾಕಿಸಿ ಒಂದರ ಪಕ್ಕ ಒಂದನ್ನು ಜೋಡಿಸಿದರೆ ಇಡೀ ಹಂಪೆಯನ್ನು ಅವುಗಳಿಂದ ಮುಚ್ಚಿ ಬಿಡಬಹುದು ಎನ್ನುವ ಮಾತು ಅತಿಶಯೋಕ್ತಿಯಲ್ಲ.
ಬಹಳ ವರ್ಷಗಳಿಂದಲೂ ಅವರಿಗೆ ಛಾಯಾಚಿತ್ರ ಪ್ರದರ್ಶನ ಮಾಡಿ ಎಂದು ಉಚಿತ ಸಲಹೆ ಕೊಡುತ್ತಿದ್ದೆ. ಆದರೆ ಅದು ಇದುವರೆಗೂ ಸಾಧ್ಯವಾಗಿಲ್ಲ. ಹಾಗಾಗಿ ಈ ಮೂಲಕ ಉಚಿತವಾಗಿ ನಾನೇ ಅವರ ಚಿತ್ರಗಳನ್ನು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಸರಿಸಲು ತೀರ್ಮಾನಿಸಿದ್ದೇನೆ.
ನಿತ್ಯವೂ ಅವರದ್ದೊಂದು ಚಿತ್ರ ಈ ಮೂಲಕ ಆಸಕ್ತರನ್ನು ತಲಪುತ್ತದೆ.
ಮತ್ತೊಂದು ಮುಖ್ಯ ವಿಷಯವೆಂದರೆ, ಬಣಗಾರರು ಕುಟುಂಬದ ಛಾಯಾಚಿತ್ರಗಳನ್ನು ತೆಗೆಯುವುದರಲ್ಲಿ ಪರಿಣಿತರು. ನಿಮ್ಮ ಮನೆಗೇ ಬಂದು ಬಹು ಸೃಜನಾತ್ಮಕವಾಗಿ ಛಾಯಾಚಿತ್ರ ತೆಗೆದುಕೊಡುತ್ತಾರೆ.
ಛಾಯಾಚಿತ್ರ ಕಲಿಕೆಯಲ್ಲಿ ಆಸಕ್ತಿ ಇರುವವರಿಗೆ ಉತ್ತಮತರಬೇತಿ ಶಿಬಿರಗಳನ್ನು ನಡೆಸುತ್ತಾರೆ.   ಎಲ್ಲಕ್ಕಿಂತ ಹೆಚ್ಚಾಗಿ ಸ್ನೇಹ ಜೀವಿ, ಹೃದಯವಂತರಾದ ಶಿವಶಂಕರ ಬಣಗಾರ ಅವರಿಗೆ ಕರ್ನಾಟಕ ಕಹಳೆ ಡಾಟ್  ಕಾಮ್ ಮ‌ೂಲಕ ಶುಭಾಶಯಗಳನ್ನು ಕೋರುತ್ತೇನೆ.

-ಡಾ.ಜೆ ಎಸ್ ಅಶ್ವತ್ಥ ಕುಮಾರ್, ಪಶು ವೈದ್ಯಾಧಿಕಾರಿಗಳು
ಸಾಹಿತಿ, ಹವ್ಯಾಸಿ ಚಿತ್ರಕಲಾವಿದರು, ಮುನಿರಾಬಾದ್
*****

One thought on “ಹೃದಯವಂತ, ಸ್ನೇಹಜೀವಿ ಫೋಟೊಗ್ರಾಫರ್ ಹಂಪಿ ಬಣಗಾರ್ -ಡಾ. ಜೆ ಎಸ್ ಅಶ್ವತ್ಥ ಕುಮಾರ್, ಮುನಿರಾಬಾದ್

  1. ಸೂಕ್ತ ಮತ್ತು ಆಪ್ತ ಬರಹ ಬಣಗಾರರೆಂಬ ಛಾಯಾಚಿತ್ರ ಕಲೆಗಾರರ ಬಗ್ಗೆ….. ಅವರು ನನಗೂ ಫೋಟೋಗ್ರಫಿ ಹುಚ್ಚು ಹಿಡಿಸಿದ ಮಹಾನುಭಾವ…… ಅವರಿಂದಾಗಿ ನಾನು ಫೋಟೋಗ್ರಫಿ ಕಲಿತು ತೆಗದು ಆರು ಬಾರಿ ಛಾಯಾಚಿತ್ರ ಪ್ರದರ್ಶನ ಮಾಡುವಂತಾಯಿತು….. ಖುಷಿಯಿಂದ…

    ಅಮರದೀಪ್

Comments are closed.