ಮನಂ- ಪದ ಸಂಪತ್ತು [ಕರ್ನಾಟಕ ಮತ್ತು ಕನ್ನಡನಾಡು ಪದಗಳ ವ್ಯುತ್ಪತ್ತಿ – ಒಂದು ಚರ್ಚೆ -ಎಂ.ನಂಜುಂಡಸ್ವಾಮಿ(ಮನಂ) ಐಪಿಎಸ್]

ಕರ್ನಾಟಕ ಮತ್ತು ಕನ್ನಡನಾಡು ಪದಗಳ ವ್ಯುತ್ಪತ್ತಿ – ಒಂದು ಚರ್ಚೆ – ಮನಂ

ಕರವರ ನಾಡು – ಕರನಾಡು – ಕರ್ನಾಡು
ಕರ್ನಾಟ – ಕರ್ನಾಟಕ

ಇದು ಒಂದು ಕಡೆ

ಕನ್ನಡ ನಾಡು
– ಕನ್ನಡ ಆಡುನುಡಿಯವರ ನಾಡು

ಕನ್ನಡ

ಕ – ಬಾಯಿ, ತೂತು, ಬಾಗಿಲು,

ನ – ವ್ಯಕ್ತಿ

ನನ – ನ್ನ – ಜನರು

ಡ – ಭಾಷೆ , ನುಡಿ

ಕನ್ನಡ – ಬಾಗಿಲಲ್ಲಿ ಇರುವ ಜನರ ಭಾಷೆ

ನನ್ನ ಅಭಿಪ್ರಾಯದಲ್ಲಿ

ಸಮುದ್ರದ ಕಡೆಯಿಂದ ಬಂದ ಜನರು ನಮಗೆ ನೀಡಿದ ಹೆಸರು ಕನ್ನಡಿಗರು. ಅವರು ಸುಮೇರಿಯನ್ ಜನರು ಎಂಬ ಸಿದ್ಧಾಂತ ನನ್ನದು. ಏಕೆಂದರೆ ಸುಮೇರಿಯನ್ ಭಾಷೆಯಲ್ಲಿ ಮಾತ್ರ ನಮ್ಮ ಕನ್ನಡದ ಅರ್ಥ ನಿರೂಪಣೆ ಸಾಧ್ಯ.
ಕರವರ ಜನಾಂಗ ಕರ್ನಾಟಕದಲ್ಲಿ ಹೊಲಯರಲ್ಲಿ ಒಂದು ಕುಲವಾಗಿ ಇಂದಿಗೂ ಇದೆ.

ನನ್ನ ಅಧ್ಯಯನದ ಪ್ರಕಾರ ಕನ್ನಡಕ್ಕೆ ಬೇರೆ ಬೇರೆ ಕಾಲ ಘಟ್ಟದಲ್ಲಿ ಬೇರೆ ಬೇರೆ ಹೆಸರುಗಳಿದ್ದವು.

ಮಾಳವ ಎಂಬುದೆ ಅತ್ಯಂತ ಹಳೆಯ ಹೆಸರು.
ಮಹಾಭಾರತದಲ್ಲಿ ಉಲ್ಲೇಖಿತವಾದ ಹೆಸರು.

ರಾಷ್ಟ್ರಕೂಟರ ಕಾಲದಲ್ಲಿ ಅದಕ್ಕೆ ಕಿರಿಯ ಅಥವಾ ಕೀಳು ಭಾಷೆ ಎಂದು ಕರೆಯುತ್ತಿದ್ದರೆಂದು ವಿದೇಶಿ ಪಯಣಿಗ ಹೇಳುತ್ತಾನೆ.

ಕರವರು ಶ್ರೀಲಂಕಾವನ್ನು ಅದರ ಆರಂಭದ ಕಾಲದಿಂದ 16 ನೇ ಶತಮಾನದವರೆಗೆ ಅಳಿದರು.
ಶ್ರೀಲಂಕಾ ಜನರು ತಮ್ಮ ಭಾಷೆಗೆ ಹೇಳು ಅಥವಾ ಎಳು ನುಡಿ ಎನ್ನುತ್ತಾರೆ. ಪರಕೀಯರು ಅದನ್ನು ಸಿಂಹಳಿ ಎನ್ನುತ್ತಾರೆ.

ಪಲ್ಲವರು ಕರವರ ಹೆಣ್ಣುಗಳನ್ನೆ ಮದುವೆ ಆಗುತ್ತಿದ್ದರು.

ಚೋಳರೂ ಕರವರಾಗಿದ್ದರು.
ಕರವರು ಭಾರತದ ಅಂತ್ಯಂತ ಹಳೆಯ ಜನಾಂಗಗಳಲ್ಲಿ ಒಂದು.
ತುಂಬಾ ಹಳೆಯ ಹೊಲ ಮಾಡುವ ಜನಾಂಗಗಳಲ್ಲಿ ಕರವರ ಕುಲಗಳಿವೆ.
ಗುಜರಾತಿನ ಕರವ ಪಟೇಲರು ಅವರಲ್ಲಿ ಒಬ್ಬರು.

ಕರ್ನಾಟಕದ ಹೊಲಯರಲ್ಲಿ ಇರುವ ಹಲವು ಕುಲಗಳಲ್ಲಿ ಕರವರ ಕುಲವೂ ಒಂದು. ನಾನೂ ಕರವರ ಕುಲದವನೇ.

– ಮನಂ
*****