ತುಮಕೂರು: ರಾಜ್ಯದಲ್ಲಿ ಸಂಶೋಧನೆಗೆ ಪೂರಕವಾದ ಅನೇಕ ಸಂಪನ್ಮೂಲಗಳು ಲಭ್ಯವಿದ್ದು, ,ಇವುಗಳನ್ನು ಬಳಕೆ ಮಾಡಿಕೊಂಡು ವೈಜ್ಞಾನಿಕ ಸಂಶೋಧನೆಯತ್ತ ವಿದ್ಯಾರ್ಥಿಗಳು ಗಮನಹರಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಕ್ರಿಸ್ತು ಜಯಂತಿ ಕಾಲೇಜಿನ ಸಂವಹನ ವಿಭಾಗದ ಸಂಯೋಜಕಿ ಡಾ. ಜ್ಯೂಬಿ ಥಾಮಸ್ ಅವರು ತಿಳಿಸಿದರು.
ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿರುವ ಎಂಟನೇ ವೆಬಿನಾರ್ ಸರಣಿ ವಿಶೇಷ ಉಪನ್ಯಾಸ ಮಾಲಿಕೆಯಲ್ಲಿ “ಪರಿಣಾಮಕಾರಿಯಾಗಿ ಸಂಶೋಧನಾ ವರದಿಗಳನ್ನು ಬರೆಯುವುದು ಹೇಗೆ” ಎಂಬ ವಿಷಯದ ಕುರಿತು ಅವರು ಬುಧವಾರ ವಿಶೇಷ ಉಪನ್ಯಾಸ ನೀಡಿದರು.
ಕೋವಿಡ್ ನಂತಹ ಸಂಕಷ್ಟದ ಸಮಯದಲ್ಲಿ ಘಟನೆಗಳನ್ನು ಕುರಿತು ವೈಜ್ಞಾನಿಕ ದೃಷ್ಟಿಕೋನದಲ್ಲಿ ಸಂಶೋಧನೆ ನಡೆಸಿ ರೋಗ ಹರಡುವಿಕೆ, ಪತ್ತೆ ಮತ್ತು ಪರಿಹಾರಕ್ಕೆ ಸಂಬಂಧಿಸಿದಂತೆ ವಿಷಯಗಳ ಕುರಿತು ಬೆಳಕು ಚೆಲ್ಲುವತ್ತ ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಸಂಶೋಧನೆಗೆ ತೊಡಗಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಮಾಧ್ಯಮ ವಿದ್ಯಾರ್ಥಿಗಳು ಪ್ರಚಲಿತ ವಿಷಯಗಳ ಕುರಿತು ಸಂಶೋಧನೆಗೆ ಒತ್ತು ನೀಡಿದಾಗ ಅದರ ಫಲಿತಾಂಶ, ಪರಿಸ್ಥಿತಿ ಬಿಕ್ಕಟ್ಟಿನ ಪರಿಹಾರಕ್ಕೆ ಸಹಾಯವಾಗಬಹುದು. ಈ ರೀತಿ ಕಿರು ಸಂಶೋಧನೆ ನಡೆಸುವತ್ತ ವಿದ್ಯಾರ್ಥಿಗಳು ಗಮನ ಹರಿಸಬೇಕೆಂದು ಡಾ. ಜ್ಯೂಬಿ ಥಾಮಸ್ ಅವರು ಹೇಳಿದರು.
ಸಂವಾದ: ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ಗಣ್ಯರು, ಮಾಧ್ಯಮ ವಿದ್ಯಾರ್ಥಿಗಳು ಹಾಗು ಇತರರು ಕೇಳಿದ ಪ್ರಶ್ನೆ ಹಾಗೂ ಸಂದೇಹದ ಬಗ್ಗೆ ವಿವರಿಸಿದರು.
ಮಾಧ್ಯಮ ಸಂಶೋಧನಾ ಕ್ರಮ, ಸಂಶೋಧಕರು ಅಳವಡಿಸಿಕೊಳ್ಳಬೇಕಾದ ಮಾರ್ಗಸೂಚಿ ಮತ್ತು ಮಾನದಂಡಗಳನ್ನು ಕ್ರಮಬದ್ಧವಾಗಿ ವಿವರಿಸಿದರು.
ವೆಬಿನಾರ್ ಅಧ್ಯಕ್ಷತೆ ವಹಿಸಿದ್ದ ಎಸ್.ಎಸ್.ಸಿ.ಎಂ.ಎಸ್ ಸಂಸ್ಥೆಯ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್ ಅವರು ಮಾತನಾಡಿದರು.
ವೆಬಿನಾರ್ ನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗೇಂದ್ರ, ಶ್ವೇತಾ ಎಂ.ಪಿ, ಜ್ಯೋತಿ ಸಿ, ಮನೂಜ್ ಕುಮಾರಿ, ವಿಜಯ್ ಕೃಷ್ಣ , ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಲೋಕೇಶ್ ಎಸ್.ಕೆ, ಅಶೋಕ್, ತುಮಕೂರು, ಹಾಸನ, ಬಳ್ಳಾರಿ, ಬೆಂಗಳೂರು, ಗುಲ್ಬರ್ಗಾ, ಕೊಪ್ಪಳದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
(ವರದಿ: ಪ್ರಭಾಕರ್ ಪಿ, ಮಾಧ್ಯಮ ವಿದ್ಯಾರ್ಥಿ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ, ತುಮಕೂರು)
*****