ಕೃಷಿ ಪ್ರಧಾನವಾದ ಬಾರತದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ -ಮಾಧ್ಯಮ ಸಂಶೋಧಕ ಡಾ. ಅಮ್ಮಸಂದ್ರ ಸುರೇಶ್ ವಿಷಾಧ

ತುಮಕೂರು: ಭಾರತದಂತಹ ಕೃಷಿ ಪ್ರಧಾನವಾದ ರಾಷ್ಟ್ರದಲ್ಲಿ ಮಾಧ್ಯಮಗಳು ಕೃಷಿಯನ್ನು ನಿರ್ಲಕ್ಷಿಸಿವೆ ಎಂದು ಮಾಧ್ಯಮ‌ ಸಂಶೋಧಕ, ಹವ್ಯಾಸಿ ಪತ್ರಕರ್ತ ಮೈಸೂರಿನ ಡಾ. ಅಮ್ಮಸಂದ್ರ ಸುರೇಶ್ ಅವರು ವಿಷಾಧಿಸಿದರು.
ನಗರದ ಶ್ರೀ ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರ ಆಯೋಜಿಸಿರುವ ವೆಬಿನಾರ್ ಸರಣಿ ವಿಶೇಷ ಉಪನ್ಯಾಸ ಮಾಲಿಕೆ-11ಯಲ್ಲಿ ಪಾಲ್ಗೊಂಡು “ಕೃಷಿ ಪತ್ರಿಕೋದ್ಯಮ” ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಪತ್ರಿಕೆಗಳು ಕಡಿಮೆ ಸ್ಥಳಾವಕಾಶ ನೀಡಿವೆ. ಇದು ಬದಲಾಗಬೇಕಿದೆ. ಬೇರೆ ಬೇರೆ ವಿಭಾಗಗಳಿಗೆ ನೀಡಿದ ಆದ್ಯತೆಯನ್ನು ಕೃಷಿಗೂ ನೀಡಬೇಕಿದೆ ತಿಳಿಸಿದರು.
ಹಸಿರು ಕ್ರಾಂತಿಯಿಂದ ಕೃಷಿ ಸಂವಹನಕ್ಕೆ ಆದ್ಯತೆ ದೊರೆಯಿತು ಬಳಿಕ ಅಭಿವೃದ್ಧಿ ಪತ್ರಿಕೋದ್ಯಮ ಶುರುವಾಯಿತು. ಇದರಲ್ಲಿ ಕೃಷಿ ಪತ್ರಿಕೋದ್ಯಮ ಪ್ರಾರಂಭವಾಗಿ ಕೃಷಿಯಲ್ಲಿನ ನೂತನ ಆವಿಷ್ಕಾರ, ಕೆಲಸ ಕಾರ್ಯಗಳ ಬಗ್ಗೆ ತಿಳಿಸಲು ಶುರುವಾಯಿತು ಎಂದು ಹೇಳಿದರು.
ಪ್ರಸ್ತುತ ದಿನಮಾನಗಳಲ್ಲಿ ಮುಖ್ಯವಾಹಿನಿಯ ಪತ್ರಿಕೆಗಳಲ್ಲಿ ಲೇಖನ ಅಂಕಣ, ನುಡಿ ಚಿತ್ರ ಬಹಳ ಕಡಿಮೆಯಾಗಿದೆ. ಹೆಚ್ಚು ನಿಯತಕಾಲಿಕೆಗಳು ಬರದಿರುವುದು ಖೇದದ ಸಂಗತಿ.
ಇದು ಬದಲಾಗಿ ಹೆಚ್ಚು ಲೇಖನ ನುಡಿ ಚಿತ್ರ ಸಂಶೋದನಾ ವರದಿಗಳು ಪ್ರಕಟವಾಗಬೇಕಿದೆ. ಪತ್ರಿಕೆಗಳು, ಟಿವಿ, ಆನ್ಲೈನ್ ಮಾಧ್ಯಮಗಳು ಕೃಷಿಗೆ ಹೆಚ್ಚಿನ ಆದ್ಯತೆ ನೀಡಿ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಕೃಷಿ ವರದಿಗಾರರಾಗಲು ಕೃಷಿ ಬಗ್ಗೆ ಪ್ರೀತಿ, ಕೃಷಿಯ ಹಿನ್ನೆಲೆ, ಸಾಮಾನ್ಯ ಜ್ಞಾನ ಇರಬೇಕು ಹಾಗೂ ಕೃಷಿ ಸುದ್ದಿಯನ್ನು ಗ್ರಹಿಸುವ ಸಾಮರ್ಥ್ಯ ಇರಬೇಕು ಆಗ ಅತ್ಯುತ್ತಮ ಕೃಷಿ ಪತ್ರಕರ್ತರಾಗಬಹುದು ಎಂದು ಡಾ. ಅಮ್ಮಸಂದ್ರ ಸುರೇಶ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸಂವಾದ: ಆನ್ಲೈನ್ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ, ಗಣ್ಯರು, ಮಾಧ್ಯಮ ವಿದ್ಯಾರ್ಥಿಗಳು ಹಾಗು ಇತರರು ಕೇಳಿದ ಪ್ರಶ್ನೆ ಹಾಗೂ ಸಂದೇಹದ ಬಗ್ಗೆ ವಿವರಿಸಿದರು. ಕೃಷಿ ಬರವಣಿಗೆಯ ಸ್ವರೂಪ ಅರ್ಥೈಸಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಕೃಷಿ ಪತ್ರಿಕೋದ್ಯಮದ ಪ್ರಾಮುಖ್ಯತೆಯನ್ನು ಅರ್ಥೈಸಿದರು.
ವೆಬಿನಾರ್ ನಲ್ಲಿ ಎಸ್.ಎಸ್.ಸಿ.ಎಂ.ಎಸ್ ನ ನಿರ್ದೇಶಕ ಡಾ. ಬಿ.ಟಿ ಮುದ್ದೇಶ್, ಸಹಾಯಕ ಪ್ರಾಧ್ಯಾಪಕರಾದ ಡಾ. ನಾಗೇಂದ್ರ, ಶ್ವೇತಾ ಎಂ.ಪಿ, ಜ್ಯೋತಿ ಸಿ, ಮನೋಜ ಕುಮಾರಿ, ಡಾ. ಮಕ್ತುಂಬಿ, ಪ್ರೊ. ರಾಮಲಿಂಗು, ಕಾಲೇಜಿನ ಹಿರಿಯ ವಿದ್ಯಾರ್ಥಿಗಳಾದ ಲೋಕೇಶ್ ಎಸ್.ಕೆ, ಅಶೋಕ್, ತುಮಕೂರು, ಬಳ್ಳಾರಿ, ಬೆಂಗಳೂರು, ಗುಲ್ಬರ್ಗಾ, ಕೊಪ್ಪಳದ ಪತ್ರಿಕೋದ್ಯಮ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕರು ಸೇರಿದಂತೆ ಇತರರು ಪಾಲ್ಗೊಂಡಿದ್ದರು.

[ವರದಿ: ಪ್ರಭಾಕರ್ ಪಿ, ಮಾಧ್ಯಮ ವಿದ್ಯಾರ್ಥಿ
ಶ್ರೀ ಸಿದ್ಧಾರ್ಥ ಮಾಧ್ಯಮ ಅಧ್ಯಯನ ಕೇಂದ್ರ,
ತುಮಕೂರು.]
*****