ಹೈ. ಕ ಪುಸ್ತಕ ಪ್ರಕಾಶಕರ, ಮಾರಾಟಗಾರರ ಮತ್ತು ಮುದ್ರಕರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ

ಕೊಪ್ಪಳ: ಹೈದರಾಬಾದ ಕರ್ನಾಟಕ ಪ್ರದೇಶದ ಲೇಖಕರ, ಸಾಹಿತಿಗಳ, ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸಿ ಅವುಗಳಿಗೆ ಮಾರುಕಟ್ಟೆಯನ್ನು ಒದಗಿಸಿ ಓದುಗರ ಸಂಖ್ಯೆಯನ್ನು ಹೆಚ್ಚಿಸುವ ದೃಷ್ಟಿಯಿಂದ ಹೈದರಾಬಾದ ಕರ್ನಾಟಕದ ಸಮಾನ ಮನಸ್ಸಿನ ಪ್ರಗತಿಪರರು ಸೇರಿ 2018-19ರಲ್ಲಿ ಹೈದರಾಬಾದ ಕರ್ನಾಟಕ ಪುಸ್ತಕ ಪ್ರಕಾಶಕರ, ಮಾರಾಟಗಾರರ ಮತ್ತು ಮುದ್ರಕರು ಸಂಘ ಅಸ್ತಿತ್ವಕ್ಕೆ ಬಂದಿತ್ತು.

ಶನಿವಾರ ಗೂಗಲ್ ಮೀಟ್ ನಲ್ಲಿ ಇಂದು ಸಭೆ ಸೇರಿ 2020-21 ಸಾಲಿನ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಮಹಿಪಾಲರಡ್ಡಿ ಮುನ್ನೂರು.ಕಲಬುರಗಿ ಉಪಾಧ್ಯಕ್ಷರಾಗಿ
ಸಂಸ್ಕೃತಿ ಪ್ರಕಾಶನದ ಸಿ. ಮಂಜುನಾಥ ಬಳ್ಳಾರಿ,
ಪ್ರಧಾನ ಕಾರ್ಯದರ್ಶಿಯಾಗಿ. ವೈ. ಬಿ. ಜೂಡಿ ಕೊಪ್ಪಳ, ಸಹ ಕಾರ್ಯದರ್ಶಿ.
ಬಸವರಾಜ ಸಿನ್ನೂರ ಯಾದಗಿರಿ, ಸಂಘಟನಾ ಕಾರ್ಯದರ್ಶಿಯಾಗಿ
ಶಿವಕುಮಾರ ಪಿ. ಹರವಿ (ದೇವದುರ್ಗ) ರಾಯಚೂರು,
ಸಹ ಸಂಘಟನಾ ಕಾರ್ಯದರ್ಶಿಯಾಗಿ ಎಂ. ಪಿ. ಮದಾಳೆ ಬೀದರ, ಖಜಾಂಚಿಯಾಗಿ
ಶ್ರೀಮತಿ ಸುಶೀಲಾ ಎಂ. ಎಸ್. ಕೊಪ್ಪಳ,
ಸಂಜೀವಕುಮಾರಸ್ವಾಮಿ ಬೀದರ, ಗಾದೆಪ್ಪ ಕಮಲಾಪುರ ಇವರು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹಾಗೂ ಸಂಚಾಲಕರಾಗಿ ಮಹೇಶಬಾಬು ಸುರ್ವೆ ಆಯ್ಕೆಯಾಗಿದ್ದಾರೆ .
ಹೈದರಾಬಾದ್ ಕರ್ನಾಟಕ ಪ್ರಕಾಶಕರ ಸಂಘದಿಂದ ಬರುವ ಆಗಸ್ಟ್ ತಿಂಗಳ ಕೂಪ್ಪಳದಲ್ಲಿ
ಪುಸ್ತಕಗಳ ರಿಯಾಯಿತಿ ಮೇಳ ನಡೆಸಲು ಚಿಂತನೆ ಇದೆ.
ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಗಳ ಪ್ರಕಾಶಕರ ಕವಿಗೋಷ್ಠಿ, ಪ್ರಕಾಶಕರಿಗೆ ಪ್ರಶಸ್ತಿ ಪ್ರದಾನ ನಡೆಸಲಾಗುವದು.
ಹೈದರಾಬಾದ್ ಕರ್ನಾಟಕದ ಏಳು ಜಿಲ್ಲೆಯ ಪ್ರಕಾಶಕರು ಹೆಸರು ನೋಂದಾಯಿಸಲು ವಿನಂತಿ ಎಂದು ಪ್ರಧಾನ ಕಾರ್ಯದರ್ಶಿ
ವೈ. ಬಿ. ಜೂಡಿ ( 9845338160) ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
*****