ಮರೆಯಾದ ಬಂಡಾಯ ಕವಿ
ನಿಮ್ಮ ಪಯಣ ಸಾಗಬಾರದಿತ್ತು ಬೇಗ
ಬಗಲಲಿ ಬಹು ಪುಸ್ತಕಗಳ ಗಂಟು
ಮೊಗದಲಿ ಹುಸಿ ನಗೆಯ ನಂಟು
ಬರಲಿಲ್ಲವೇಕೆ ಮತ್ತೆಸಾಹಿತ್ಯದ ಜಗಕೆ
ನಿಮ್ಮ ಕವನಗಳ ಗತ್ತು ಸಕತ್ತು
ಅದಾಗುತಿತ್ತು ಬಹುಜನರ ಸಂಪತ್ತು
ಚಿಂತನೆಗಳ ಮೂಟೆಯ ಸವಲತ್ತು
ಮರೆಯಲಾಗದು ಕವನಗಳಗಮ್ಮತ್ತು
ನೀವು ಬರೆದ ಕವನ ಬಂಡಾಯದ
ಯಾರಿಗೆ ಬಂತು ನಲ್ವತ್ತೆಳರ ಸ್ವಾತಂತ್ರ್ಯ
ಮಹಡಿ ಮಹಲ್ಗಳ ಕಟ್ಟಿದ ನನ್ನ ಜನ
ಕುಂತ್ರೆ ನಿಂತ್ರೆ ಅವನದೆ ಧ್ಯಾನ ಹೀಗೆ
ಮರೆಯಲಾಗದು ನಿಮ್ಮ ಕವನಗಳ
ಆಕ್ರಂದನ ತಟ್ಟುವ ಅಂತಾ ಪದಗಳ
ಮರೆತಿರೇಕೆ ಬಹುಸಾಹಿತ್ಯ ಬಳಗಗಳ
ಮತ್ತೆ ಹುಟ್ಟಿ ಬೆನ್ನಿರೆಂದು ಕೋರುವ
ನಿಮ್ಮ ಸಾಹಿತ್ಯ ಮೆಚ್ಚುಗೆ ಮನಗಳು
-ಎನ್.ಎಂ.ಮಾಧವಿ ನಾಗಬಸವಯ್ಯ
ಮಾಂಬಳ್ಳಿ.
ಚಾಮರಾಜನಗರ ಜಿಲ್ಲೆ
******
ಎನ್.ಎಂ.ಮಾಧವಿ ನಾಗಬಸವಯ್ಯ