ಸೇಡಂ : ನಗರದ ಹಾಲಪ್ಪಯ್ಯ ವಿರಕ್ತಮಠ ಅಂತರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಉಚಿತ ಪ್ರಾಣಾಯಾಮ ಅಭ್ಯಾಸವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು.
ಯೋಗ ಶಿಬಿರದ ಸಾನಿಧ್ಯವಹಿಸಿದ ಶ್ರೀ ಪಂಚಾಕ್ಷರಿ ಸ್ವಾಮಿಗಳು ಮಾತನಾಡಿ, ಇಂದಿನ ಅಶುದ್ಧ ವಾತಾವರಣದಲ್ಲಿ ಸಣ್ಣ ಭರವಸೆ ಮತ್ತು ಜೀವನೋತ್ಸಾಹ ತುಂಬಲು ಯೋಗ ನಿರಂತರ ಮೈಗೂಡಿಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಪ್ರಾಣಾಯಾಮ ಅವಶ್ಯಕವಾಗಿದೆ ಎಂದರು.
ಮುಖ್ಯ ಅತಿಥಿಯಾಗಿದ್ದ ಹಿರಿಯ ಪತ್ರಕರ್ತ, ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮಾತನಾಡಿ, ಅನುದಿನ ನಮ್ಮ ಕ್ರಿಯೆಯಲ್ಲಿ ಯೋಗ ಒಂದು ಮಹೋನ್ನತ ಬದಲಾವಣೆ ತರಬಲ್ಲದು ಎಂದು ಅಭಿಪ್ರಾಯ ಪಟ್ಟರು.
ಕಾರ್ಯಕ್ರಮದಲ್ಲಿ ವಿ ಎಚ್ ಪಿ ಕಾರ್ಯದರ್ಶಿ ಶಿವಕುಮಾರ್ ಬೋಳಶೆಟ್ಟಿ ಅತಿಥಿಯಾಗಿ ಭಾಗವಹಿಸಿದ್ದರು.
ಯೋಗ ಮತ್ತು ಅದರ ಪ್ರಾಮುಖ್ಯತೆ ಹಾಗೂ ಕೋವಿಡ್ ನಿಯಂತ್ರಣಕ್ಕಾಗಿ ಪ್ರಾಣಾಯಾಮ ಅಭ್ಯಾಸದ ಕುರಿತ ತರಬೇತಿಯನ್ನು ಯೋಗ ಶಿಕ್ಷಕ ಪ್ರವೀಣ್ ಎಸ್.ಮುಗನೂರು ಅವರು ನೀಡಿದರು.
(ವರದಿ : ವಿಜಯಭಾಸ್ಕರರೆಡ್ಡಿ, ಕಲಬುರಗಿ)
*****