ಪ್ರಜಾಕವಿಗೆ ನುಡಿನಮನ
ಸೈದ್ದಾಂತಿಕ ನೆಲೆಯಲ್ಲೆ ಬದುಕಿ
ವೈಚಾರಿಕ ಪ್ರಜ್ಞೆಯಿಂದ ಚಿಂತಿಸಿ
ರೈತರ,ಕೂಲಿಕಾರರ,ಶೋಷಿತ ಜನಾಂಗದ
ಬದುಕಿಗೆ ಬೆಳಕು ಚಲ್ಲುವ ಕಾವ್ಯ
ನಿಗಿ ನಿಗಿ ಕೆಂಡವೇ ಹೊರತು
ಭಂಡ ಭಾವನೆಯಲ್ಲ
ಸುಟ್ಟುಕೊಂಡವನಿಗೆ ಚನ್ನಾಗಿ ಗೊತ್ತು
ಬೆಂಕಿಯ ಬಿಸಿಯ ತಾಪ
ಶೋಷನೆ,ಅವಮಾನ,ಅಸಮಾನತೆಯ
ವಿರುದ್ಧ ಹೊರಾಡುವ ಒಂದೊಂದು
ನುಡಿಗಳು ಕಾವ್ಯದ ಧ್ವನಿಯಾಗಬಲ್ಲವಲ್ಲವೆ?
ಕಾರ್ಮೋಡಗಳ ಕಗ್ಗತ್ತಲಲ್ಲಿ
ಕಲ್ಲು,ಮುಳ್ಳು,ತಗ್ಗು-ದಿನ್ನೆ
ಕಾಡು-ಮೇಡು, ಕಂದರ,ಕಂದಾಚಾರ
ಕೊರಚಲುಗಳಲೆಲ್ಲ ಕಣ್ಣಿದ್ದು
ಕುರಡಾಗಿ ಸುತ್ತಾಡಲಿಲ್ಲವೆ?
ಶತಶತಮಾನದಿಂದ ನನ್ನವರು?
ಸ್ವಾತಂತ್ರ್ಯ ದೇಶಕ್ಕೆ ಬಂತೆಹೊರತು
ಶೋಷಿತವರ್ಗಕ್ಕೆ,ಬಡವರ ಮನೆಗೆ
ಬರಲಿಲ್ಲ, ಬೆಳಕಿನ ಕಿರಣ ತರಲಿಲ್ಲ
ಕವಿತೆ ಎಷ್ಟು ಗಟ್ಟಿಧ್ವನಿಯ ಸತ್ಯ ನೋಡಿ
ಸತ್ಯ ಕೆಲವರಿಗೆ ಚುಚ್ಚುತ್ತದೆ
ಕೆಲವರಿಗೆ ತಟ್ಟುತ್ತದೆ
ಇನ್ನು ಕೆಲವರಿಗೆ ಮುಟ್ಟುತ್ತದೆ
ಇದೆ ಅಲ್ಲಿವೆ ನಿಜವಾದ ಕಾವ್ಯ?
ಖಡ್ಗಕಿಂತ ಹರಿತವಾದ ಶಬ್ದಗಳ ಪ್ರಯೋಗ
ಅದರ ಇರಿತ ಮುರಿತ ಹೋರಾಟ
ಕ್ರಾಂತಿಕಾರನ ಒಡಲಲ್ಲಡಗಿದ
ಕೆಂಡವೇ ಹೊರತು ಬೇರಲ್ಲ
ತಿಳಿ ಹಾಸ್ಯದ ಮಾತು, ಮೃದುಮನದ
ಪ್ರೇಮಕವಿ,ದಲಿತ-ಬಂಡಾಯದ ಬೇರುಖಾಂಡ
ನುಡಿದರೆ ಹಾಸ್ಯ, ಬರೆದರೆ ಬೆಂಕಿ
ಸಿದ್ದಲಿಂಗಯ್ಯರಿಗೆ ನನ್ನ ನುಡಿನಮನಗಳು
-ಡಾ. ಮಹಾದೇವ ಪೋತರಾಜ್, ಖಾನಟ್ಟಿ
ಮೂಡಲಗಿ ತಾ. ಬೆಳಗಾವಿ ಜಿಲ್ಲೆ
*****