ಅನುದಿನ ಕವನ-೧೭೩ ಕವಯತ್ರಿ:ಧರಣೀಪ್ರಿಯೆ, ದಾವಣಗೆರೆ, ಕವನದ ಶೀರ್ಷಿಕೆ: ನೆನಪುಗಳು

ನೆನಪುಗಳು….
(ತಲ ಷಟ್ಪದಿಯಲ್ಲಿ)

ನೆನಪು ನೂರು
ಕನಸು ಜೋರು
ನನಸು ಬರೀ ಕಾತರ|
ಮನದಿ ಮೂಡಿ
ದಿನವು ಚೆಂದ
ಜನರ ಬದುಕು ಹರುಷವು|

ಬುವಿಯಮೇಲೆ
ಸವಿಯ ಸೊಗಸು
ದಿವಸಹೀಗೆ ಸಾಗಲು|
ನವಿರುಭಾವ
ಕವಿದ ನೆರಳು
ಭವದ ಜೀವ ಸುಂದರ||

ಉದಯಮೂಡಿ
ಹದದಬೆಳಕು
ಮುದದಿ ಚೆಲ್ಲಿ ಸೂಸಲು|
ಬದಿಗೆಸರಿಸಿ
ಕದವತೆರೆದು
ಪದವಹಾಡಿ ಪಕ್ಕಿಯು||

ಹಸುರ ಮೇಲೆ
ನಸುಕಿನಲ್ಲಿ
ಮುಸುಕುಮುಚ್ಚಿ ಧರೆಯಲಿ|
ರಸದ ಘಳಿಗೆ
ಹಸನು ಮಾಡಿ
ತುಸುವೆ ನಲಿವು ಕಾಣುತ||

-ಧರಣೀಪ್ರಿಯೆ
ದಾವಣಗೆರೆ
*****

ಧರಣೀಪ್ರಿಯೆ, ದಾವಣಗೆರೆ