ತನ್ನ ಪ್ರೀತಿಯ ಪುತ್ರಿಗೆ ಅನ್ನದಾತನ ಬಿನ್ನಹ!!
ಹಚ್ಚ ಹಸಿರ ಭೂಮಿ…
ಕಡುಕಪ್ಪು ಮೋಡ…
ಬಣ್ಣದ ಕನಸುಗಳ ಬಿತ್ತೋಣ ಬಾರ!!
ಶಾಲೆಯಂತೂ ತೆರೆಯಲಿಲ್ಲ!!
ಜೊತೆಯಾಗಿ ಕೂಡಿ ಆಡೊಂಗಿಲ್ಲ!!
ಪ್ರಕೃತಿಯ ಮಡಿಲಲ್ಲಿ ಆಡುವಂತೆ ಬಾರ!!
ಹೊಲಗದ್ದೆಯ ತುಂಬೆಲ್ಲಾ
ಹರಡಿಹದು ಹಸಿರೆಂಬ ಉಸಿರು!
ಈ ಹಸಿರಲ್ಲಡಗಿದೆ ನನ್ನಂತ ಕೋಟ್ಯಾಂತರ
ಜನರ ಉಸಿರು!!
ಹಗಲಿರುಳು ನಾ ದುಡಿಯುವೆ
ಕೂಡಿಸಲು ನಿನಗಾಗಿ ನಾಕು ಕಾಸು!
ನನ್ನಂತೆ ಇಲ್ಲಿಹರು ನೂರಾರು ಜನರು!!
ಚೆನ್ನಾಗಿ ಓದಿ ನೀ ಆಗಬೇಕು
ಅಸಹಾಯಕರಿಗೆ ಬೆಳಕು!
ಬೆಳಗಿಸಬೇಕು ನೀನು ಸಮಾಜದ
ನೂರಾರು ಜನರ ಬಾಳು!!
ಸಮಾಜದ ಅನ್ಯಾಯದ ವಿರುದ್ದ ಹೋರಾಡು!
ನಾಡು-ನುಡಿ, ನೆಲ-ಜಲವ ಕಾಪಾಡು!
ದೇಶದ ಉನ್ನತಿಗೆ ದೊಡ್ಡ
ಕೊಡುಗೆಯ ನೀ ನೀಡು!!
– ಸಂಜಯ್ ಹೊಯ್ಸಳ, ಕೃಷ್ಣರಾಜನಗರ
*****
Nice
ಕವಿತೆ ಪ್ರಕಟಿಸಿದ್ದಕ್ಕಾಗಿ ಧನ್ಯವಾದಗಳು ಸರ್