ಅನುದಿನ ಕವನ-೧೭೭, ಕವಿ: ಪ್ರಕಾಶ್ ಮಲ್ಕಿಒಡೆಯರ್, ಕವನದ ಶೀರ್ಷಿಕೆ: ನಾವು ಪ್ರೇಮಿಗಳು

ನಾವು ಪ್ರೇಮಿಗಳು
*****

ಓssಗೆಳೆಯಾ!
ನಿನ್ನ ವರ್ತನೆ ಯಲ್ಲಿ
ಪರಿವರ್ತನೆ
ಕಾಣುತ್ತಿದೆ ಯೆಲ್ಲಾ ಯಾಕೆ?
ಪ್ರೇಮಿಗಳು ನಾವು
ಭಿನ್ನತೆ ಯಿದ್ದರೆ
ಅದೂಒಂದುಬದುಕೇ?
ನಾss ಕರೆಯಲಿಲ್ಲ
ನೀssಬರಲಿಲ್ಲ
ಅಲ್ಲವೇ ನಿನ್ನ ತರ್ಕ
ಕರೆಯದೆಲೆ ಬರುವವನ…,,….
ಸರ್ವಜ್ಞ ನ ವಚನ ನೆನಪಾಗಿ
ಹೀಗೆ ನಿಂತುಬಿಟ್ಟೆಯಾ
ಕಲ್ಲಾಗಿ ಗಕ್ಕ!
ವಚನ-ಕವನ ನಮಗಲ್ಲ
ನಮಗೆ ನಮ್ಮದೇ ಜೀವನ
ನಾವು ಪ್ರೇಮಿಗಳು
ನಮ್ಮದು ಹೂ-ಬನ
ನಮಗೆ ನಮ್ಮದೇಲೋಕ
ನಾವಿರುವೆಡೆ ಸಕಲವೂ ನಾಕ!
ನೋಡಿಲ್ಲಿ ನನ್ನಕಣ್ಣ
ಅದರೊಳು ಹೇಗೆ ನಿಂತಿದೆ ನಿನ್ನ ಬಿಂಬ
ಅದೋ ನೋಡಲ್ಲಿ
ನಿನ್ನ ಕಣ್ಣೊಳು ನನ್ನ ಬಿಂಬ!
ನನ್ನ ಹೃದಯ ದ ಹಾಳೆಯ ಮೇಲಣ
‘ಕರೆ’ಯ ಕವನವ
ನೀssಓದದಿದ್ದರೆ
ನನ್ನ ಕಣ್ಣ ಸೂಚನೆಯ
ಸುಳಿವು ಹಿಡಿದು ನೀssಬರದಿದ್ದರೆ
ನಾssನಿನ್ಬ ಪ್ರೀತಿಸಲಿ ಹೇಗೇ?
ಕಣ್ಣು ಮಾತಾಡುವ
ಪ್ರೀತಿ ಯ ಪವಾಡವ
ಪ್ರೇಮಿ ಗುರುತಿಸಬೇಕು!
ಬದುಕ ಬಯಲ ಮೈದಾನ ದಲ್ಲಿ
ನಾವು ಮೈಮರೆಯಬೇಕು
ಯಾಕೆಂದರೆ ನಾವು ಪ್ರೇಮಿಗಳು
ನಮಗೆ ನಮ್ಮದೇ ಲೋಕ
ನಾವಿರುವೆಡೆ ಸಕಲವೂ ನಾಕ!

-ಪ್ರಕಾಶ್ ಮಲ್ಕಿ ಒಡೆಯರ್

ಹೂವಿನ ಹಡಗಲಿ
*****