ಗ್ರಂಥ ಭಂಡಾರ
ಸ್ವರ್ಗದಲ್ಲಿ ಪುಸ್ತಕ ಅಂಗಡಿ ಇಟ್ಟು
ಪಾಪಿಗಳಿಗೆ ಹೇಳುವೆ ಓದಲು ಮನವಿಟ್ಟು
ಭೂಮಿಯಲ್ಲಿ ಬಿಟ್ಟಿರುವ ಜ್ಞಾನದ ಆಲಯ
ಮರುಭೂಮಿಯಂತೆ ಆಯ್ತು ಮನದ ನಿಲಯ
ನರಕದಂತೆ ಅಜ್ಞಾನ ತುಂಬಿದೆ ಜನರಲ್ಲಿ
ಇಲ್ಲಿ ಯಾರು ಓದುವುದಿಲ್ಲ ದಡ್ಡರಿಲ್ಲಿ
ದೇವರಿಗೆ ಬರೆದು ಕೊಡುವೆ ನನ್ನದೆ ಕಥೆ
ಅದರಲ್ಲಿ ಬರೆದಿರುವೆ ಭೂಮಿಯ ವ್ಯಥೆ
ಬರೆದಿಟ್ಟ ಗ್ರಂಥಗಳನ್ನು ಪುನಃ ತೆರೆಯುವೆ
ಪಂಪ ರನ್ನ ಪೊನ್ನ ಜನ್ನ ಬರೆದ ಸಾಹಿತ್ಯವೆ
ದೇವತೆಗಳನ್ನು ಕರೆದು ಕೃತಿ ತೋರಿಸುವೆ
ಅವರಿಂದಲೇ ಪುಸ್ತಕ ಬಿಡುಗಡೆ ಮಾಡಿಸುವೆ
ಮುಕ್ಕೋಟಿ ದೇವತೆಗಳಿಂದ ಕವಿತೆ ಓದಿಸುವೆ
ಬ್ರಹ್ಮ ವಿಷ್ಣು ಮಹೇಶ್ವರ ಹತ್ತಿರ ಮುನ್ನುಡಿ ಬರೆಸುವೆ
ಸಾಹಿತ್ಯ ಲೋಕವನ್ನು ದೇವತೆಗೆ ತೋರಿಸುವೆ
ಬ್ರಹ್ಮಾಂಡದ ವೈಶಿಷ್ಟ್ಯ ಎಲ್ಲಾ ಹೇಳುವೆ
ಅವರಿಂದಲೆ ಸೃಷ್ಟಿ ತಾನೆ ಭೂಮಿ ಆಕಾಶ
ಭೂಮಿಯಲ್ಲಿ ಬದುಕಲು ಮನುಜನಿಗೆ ಅವಕಾಶ
ಧರೆಯಲ್ಲಿರುವ ಜೀವ ಕೋಟಿಗು ಪುಸ್ತಕ ಮಾಲೆ
ಸತ್ಯವನ್ನು ತೆರೆದಿಟ್ಟ ಬುದ್ಧ ಬಸವ ಅಂಬೇಡ್ಕರ್
ಅವರ ನೆನಪಿಗೆ ಅರಮನೆಯ ಕಟ್ಟಿ ಬಿಡುವೆ
ಜ್ಞಾನಿಗಳ ಕರೆತಂದು ಹೊಸ ಗ್ರಂಥ ಬರೆಸುವೆ
-ಜಿ ಟಿ ಆರ್ ದುರ್ಗ
ಬಂಗಾರಪೇಟೆ
*****